(ನ್ಯೂಸ್ ಕಡಬ) newskadaba.com ಧಾರವಾಡ, ಫೆ. 02. ಪೊಲೀಸ್ ಠಾಣೆಯ ಎದುರು ನಿಲ್ಲಿಸಲಾಗಿದ್ದ ಪೊಲೀಸ್ ವಾಹನವನ್ನು ಕಳ್ಳತನಗೈದ ಆರೋಪಿಯನ್ನು ಅಣ್ಣಿಗೇರಿ ಪೊಲೀಸರು ಪತ್ತೆಹಚ್ಚಿದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಅಂಬಿಕಾನಗರ ನಿವಾಸಿ ನಾಗಪ್ಪ ಹಡಪದ ಎಂದು ಗುರುತಿಸಲಾಗಿದೆ. ಪೊಲೀಸ್ ಸಿಬ್ಬಂದಿ ಪೊಲೀಸ್ ವಾಹನವನ್ನು ಬಳಸಿ ಕೀಯನ್ನು ವಾಹನದಲ್ಲೇ ಬಿಟ್ಟಿದ್ದು, ಇದನ್ನು ಗಮನಿಸಿದ ಆರೋಪಿ ಬೊಲೆರೋವನ್ನು ಕಳ್ಳತನ ಮಾಡಿ ಬ್ಯಾಡಗಿವರೆಗೆ ತೆರಳಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ವಾಹನವನ್ನು ಹಿಂಬಾಲಿಸಿ ವಾಹನ ಸಹಿತಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
Also Read ಬೆಳ್ಳಾರೆ: ಮದರಂಗಿ ಶಾಸ್ತ್ರ ಮುಗಿಸಿದ ಮದುಮಗಳು ನಾಪತ್ತೆ ➤ ಬೆಳ್ಳಂಬೆಳಗ್ಗೆ ಮದುವೆ ಮನೆಯವರಿಗೆ ಬಿಗ್ ಶಾಕ್