ವೃದ್ದೆಯರನ್ನು ಕಟ್ಟಿಹಾಕಿ ಮನೆ ದರೋಡೆ ➤ 2.5 ಲಕ್ಷ ರೂ ನಗದು ಹಾಗೂ 83 ಗ್ರಾಂ. ಚಿನ್ನಾಭರಣ ಕಳವು…!!



(ನ್ಯೂಸ್ ಕಡಬ) newskadaba.com ಮಡಿಕೇರಿ, ಫೆ. 02. ತಡರಾತ್ರಿಯಲ್ಲಿ ಮನೆಯೊಳಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ವೃದ್ದೆಯರನ್ನು ಕಟ್ಟಿ ಹಾಕಿ ಕಳ್ಳತನಗೈದ ಘಟನೆ ಕೊಡಗು ಜಿಲ್ಲೆಯ ನಾಪೊಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿಗೇರಿಯಲ್ಲಿ ನಡೆದಿದೆ.








ವೃದ್ದೆಯರಾದ ಜಾನಕಿ ಹಾಗೂ ಅಮ್ನಕ್ಕಿ ಎಂಬವರನ್ನು ಬೆದರಿಸಿ, ಅವರ ಕೈಕಾಲುಗಳನ್ನು ಕಟ್ಟಿಹಾಕಿದ ಕಳ್ಳರು ಮನೆಯಲ್ಲಿದ್ದ 2.5 ಲ.ರೂ ನಗದು ಹಾಗೂ 83 ಗ್ರಾಂ. ಚಿನ್ನಾಭರಣ ಕಳವು ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ನಾಪೊಕ್ಲು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






 

error: Content is protected !!
Scroll to Top