ಬೆಳ್ಳಾರೆ: ಅಂಚೆ ಕಛೇರಿಯಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜ. 26. ಇಲ್ಲಿನ ಆಟೋ ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಅಂಚೆ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಸುಳ್ಯ ಅಂಚೆ ನಿರೀಕ್ಷಕ ಸುದೀಪ್ ಕುಮಾರ್ ಬಿ ಹಾಗೂ ಅಂಚೆ ಪಾಲಕ ಲಕ್ಷ್ಮಣ್ ನಾಯ್ಕ ಧ್ವಜಾರೋಹಣ ನೆರವೇರಿಸಿ, ಬಳಿಕ ಅಂಚೆ ನಿರೀಕ್ಷಕರಾದ ಸುದೀಪ್ ಕುಮಾರ್ ಬಿ ಗಣರಾಜ್ಯೋತ್ಸವ ದಿನದ ಮಹತ್ವತೆ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಂಚೆ ಸಿಬ್ಬಂದಿಗಳಾದ ರವಿ , ರವಿರಾಜ್, ಬಾಲಕೃಷ್ಣ, ಅನಂತಕೃಷ್ಣ ಪ್ರಭು, ಬಾಲಕೃಷ್ಣ, ದಿಲೀಪ್, ಜಾನಕಿ, ಸುಜಾತ ಹಾಗೂ ಶಶಿರೇಖಾ ಮೊದಲಾದವರು ಉಪಸ್ಥಿತರಿದ್ದರು.

 

 

 

 

Scroll to Top