ಗೀಸರ್ ನಿಂದ ಅನಿಲ ಸೋರಿಕೆ ➤ ಸ್ನಾನಕ್ಕೆಂದು ತೆರಳಿದ್ದ ತಾಯಿ- ಮಗಳು ಮೃತ್ಯು..!



(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 17. ಸ್ನಾನಕ್ಕೆಂದು ಬಾತ್ ರೂಂ‌ಗೆ ತೆರಳಿದ್ದ ತಾಯಿ- ಮಗಳು ಉಸಿರುಗಟ್ಟಿ ಮೃತಪಟ್ಟ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.








ಮೃತರನ್ನು ತಾಯಿ ಮಂಗಳ(35) ಹಾಗೂ ಮಗಳು ಗೌತಮಿ (7) ಎಂದು ಗುರುತಿಸಲಾಗಿದೆ. ರಾಮನಗರ ನಿವಾಸಿಗಳಾದ ಇವರು ಸುಮಾರು ಹದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇವರು ತನ್ನ ಮಗಳನ್ನು ಸ್ನಾನಕ್ಕೆಂದು ಸ್ನಾನಗೃಹಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಬಿಸಿನೀರಿಗಾಗಿ ಗೀಸರ್ ಆನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿದ್ದು, ಪರಿಣಾಮ ತಾಯಿ- ಮಗಳು ಇಬ್ಬರೂ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top