ಕಡಬ: ಇಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಪಕೀರಮೂಲ್ಯ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಕಡಬ, ಡಿ. 18. ಉಳ್ಳಾಲ ನಗರಸಭೆಯಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾಗಿದ್ದ ಫಕೀರಮೂಲ್ಯ (ಪ್ರಕಾಶ್) ಅವರನ್ನು ಕಡಬ ನೂತನ ಪಟ್ಟಣ ಪಂಚಾಯತ್ ಗೆ ಪೂರ್ಣಕಾಲಿಕ ಮುಖ್ಯಾಧಿಕಾರಿಯಾಗಿ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಪ್ರಕಾಶ್ ಅವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ‌. ಪುತ್ತೂರು ನಿವಾಸಿಯಾದ ಇವರು ಈಗಾಗಲೇ ಪುತ್ತೂರು, ಮೂಡಬಿದ್ರೆ, ವಿಟ್ಲ ಹಾಗೂ ಉಳ್ಳಾಲ ನಗರಸಭೆಯ ಕಂದಾಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Scroll to Top