(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ಜಿಲ್ಲೆಯಲ್ಲಿ ಹೊಸದಾಗಿ ಆರಂಭಗೊಂಡಿರುವ ಪೌರರಕ್ಷಣಾ ಪಡೆಗೆ ಸೇರಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೇರಲಿಚ್ಚಿಸುವ ಅಭ್ಯರ್ಥಿಗಳಿಗೆ 20 ವರ್ಷ ಮೇಲ್ಪಟ್ಟಿರಬೇಕು. ಜಿಲ್ಲೆಯ ಖಾಯಂ ನಿವಾಸಿಗಳಾಗಿದ್ದು, ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿರಬಾರದು. ಅರ್ಜಿಯ ಜೊತೆಗೆ ವಿದ್ಯಾರ್ಹತೆ, ವಯಸ್ಸಿನ ದಾಖಲೆ, ದೈಹಿಕ ಅರ್ಹತಾ ಪ್ರಮಾಣ ಪತ್ರ, ಭಾವಚಿತ್ರ ಹಾಗೂ ವಾಸಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳ ನಕಲು ಪ್ರತಿಯನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದು. ಯಾವುದೇ ಸಂಭಾವನೆ ಅಪೇಕ್ಷೆ ಇಲ್ಲದ, ಸಾಮಾಜಿಕ ಸೇವೆ ಮಾಡಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಹಾಗೂ ಯುವಜನರು ಅರ್ಜಿ ಸಲ್ಲಿಸಬಹುದು. ಪೌರರಕ್ಷಣಾ ಪಡೆಗೆ ನೋಂದಾಯಿತರಾದ ಸದಸ್ಯರನ್ನು ನೈಸರ್ಗಿಕ ವಿಕೋಪಗಳಾದ ನೆರೆಹಾವಳಿ, ಭೂಕಂಪ, ಸುನಾಮಿ, ಸೈಕ್ಲೋನ್, ಭೂಕುಸಿತ, ಕಟ್ಟಡ ಕುಸಿತ, ಅನಿಲ ದುರಂತ, ಜನರ ಆಸ್ತಿಪಾಸ್ತಿ, ಪ್ರಾಣ ರಕ್ಷಣೆ ಹಾಗೂ ಸಮಾಜದ ರಕ್ಷಣಾ ಕಾರ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಗೃಹರಕ್ಷಕ ದಳ ಕಚೇರಿ, ಮೇರಿಹಿಲ್, ಮಂಗಳೂರು, ದೂರವಾಣಿ ಸಂಖ್ಯೆ: 0824-2220562 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.