ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರು..! ➤ ಪ್ರಯಾಣಿಕರು ಪಾರು

(ನ್ಯೂಸ್ ಕಡಬ) newskadaba.com ಪಾಣಾಜೆ, ಡಿ. 16. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪುತ್ತೂರು- ಪಾಣಾಜೆ ರಸ್ತೆಯ ಚೆಲ್ಯಡ್ಕ ಎಂಬಲ್ಲಿ ತೋಟಕ್ಕೆ ಉರುಳಿ ಬಿದ್ದ ಘಟನೆ ಗುರುವಾರದಂದು ಮುಂಜಾನೆ ವರದಿಯಾಗಿದೆ.


ಬೆಟ್ಟಂಪಾಡಿ ಬಳಿಯ ಡೆಮ್ಮಂಗಾರದಿಂದ ಪುತ್ತೂರಿಗೆ ಹೊರಟಿದ್ದ ಕಾರು ಚೆಲ್ಯಡ್ಕ ಎಂಬಲ್ಲಿ ರಸ್ತೆಯ ಬದಿಯಲ್ಲಿನ ತೋಟಕ್ಕೆ ಬಿದ್ದಿದ್ದು, ಅದರಲ್ಲಿದ್ದ ಐವರು ಪ್ರಯಾಣಿಕರು ಪವಾಡಸದೃಶ ಪಾರಾಗಿದ್ದಾರೆ ಎನ್ನಲಾಗಿದೆ.

Scroll to Top