ಮಡಿಕೇರಿಯ ಎಸ್.ಐ ಕಡಬ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ



(ನ್ಯೂಸ್ ಕಡಬ) newskadaba.com ಕಡಬ, ಡಿ. 15. ಮಡಿಕೇರಿಯಲ್ಲಿ ಎಸ್.ಐ ಆಗಿರುವ ಸುಳ್ಯ ತಾಲೂಕಿನ ನಡುಗಲ್ಲು ನಿವಾಸಿ ಚಿನ್ನಪ್ಪ ನಾಯ್ಕ(59) ಅವರು ಬುಧವಾರದಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.







ಇವರು ನವೆಂಬರ್ ತಿಂಗಳಿನಲ್ಲಿ ಎಸ್ಐ ಆಗಿ ಭಡ್ತಿ ಹೊಂದಿದ್ದು, ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದು, ಈ ಹಿನ್ನೆಲೆ ರಜೆ ಪಡೆದು ಮನೆಯಲ್ಲೇ ಇದ್ದು ಆರೋಗ್ಯವಾಗಿದ್ದರು. ಇಂದು ಮುಂಜಾನೆ ಹಠಾತ್ ಆಗಿ ಅಸ್ವಸ್ಥಗೊಂಡಿದ್ದು, ಕೂಡಲೇ ಕಡಬ ಸರಕಾರಿ ಆಸ್ಪತ್ರೆಗೆ ಕರೆತರುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.






error: Content is protected !!
Scroll to Top