ಬೆಳ್ತಂಗಡಿ: ದೊಣ್ಣೆಯಿಂದ ಹೊಡೆದು ಕೊಲೆಯತ್ನ..! ➤ ವ್ಯಕ್ತಿ ಗಂಭೀರ



(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 11. ಕೊಯ್ಯೂರು ಗ್ರಾಮದ ಬೀಜದಡಿ ನಿವಾಸಿ ವಂಕಪ್ಪ ಗೌಡ(40) ಎಂಬವರಿಗೆ ಪ್ರಮೋದ್ ಎಂಬಾತ ಮರದ ಕೋಲಿನಿಂದ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.








ಜಮೀನಿನ ವಿಚಾರವಾಗಿ ಆರೋಪಿ ಪ್ರಮೋದ್ ಎಂಬಾತ ವೆಂಕಪ್ಪ ಗೌಡರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮರದ ದೊಣ್ಣೆಯಿಂದ ಹೊಡೆದಿದ್ದು, ಗಂಭೀರ ಗಾಯಗೊಂಡ ವೆಂಕಪ್ಪ ಗೌಡರ ಬೊಬ್ಬೆ ಕೇಳಿ ಸ್ಥಳೀಯರು ಓಡಿಬಂದು ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆರೋಪಿ ಈ ಹಿಂದೆ ವೆಂಕಪ್ಪ ಗೌಡ ಹಾಗೂ ಅವರ ಸಹೋದರ ಮೆಲೆ ತಲವಾರು ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದ ಎಂದೆನ್ನಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top