ರೈಲು ಢಿಕ್ಕಿ ಹೊಡೆದು ಚಿರತೆ ಸಾವು..!

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಡಿ. 10. ರೈಲು ಢಿಕ್ಕಿ ಹೊಡೆದು ಚಿರತೆಯೊಂದು ಮೃತಪಟ್ಟ ಘಟನೆ ತಾಲೂಕಿನ ನೀಲಾವರ ಸಮೀಪ ನಡೆದಿದೆ.

 

ಢಿಕ್ಕಿಯ ರಭಸಕ್ಕೆ ಚಿರತೆಯು ರೈಲ್ವೇ ಬ್ರಿಡ್ಜ್ ನಿಂದ ಗದ್ದೆಗೆಸೆಯಲ್ಪಟ್ಟು ಮೃತಪಟ್ಟಿದೆ. ಚಿರತೆಯು ಆಹಾರವನ್ನು ಅರಸಿಕೊಂಡು ಗ್ರಾಮಕ್ಕೆ ಬಂದಿರಬಹುದು ಎಂದು ಅಭಿಪ್ರಾಯ ಪಡಲಾಗಿದೆ. ಕುಂದಾಪುರ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಚಿರತೆಯ ಮೃತದೇಹವನ್ನು ಪರಿಶೀಲನೆ ನಡೆಸಿದ್ದಾರೆ.

 

Scroll to Top