ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಬೈಕ್ ಢಿಕ್ಕಿ ➤ ಸವಾರರಿಬ್ಬರು ದುರ್ಮರಣ



(ನ್ಯೂಸ್ ಕಡಬ) newskadaba.com ವಿಜಯಪುರ, ನ. 23. ರಸ್ತೆಯಲ್ಲಿ ನಿಂತಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೆ ವೇಗವಾಗಿ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಮೃತಪಟ್ಟ ಘಟನೆ ಕೋಲಾರ ತಾಲೂಕಿನ ತೆಲಗಿ ಎಂಬಲ್ಲಿ ನಡೆದಿದೆ.







ಮೃತಪಟ್ಟವರನ್ನು ಈರಣ್ಣ ವಾಲಿಕಾರ ಹಾಗೂ ಹಿಂಬದಿ ಸವಾರ ಸಿದ್ದಣ್ಣಗೌಡ ಜಮದರಕಾಣೆ(22) ಎಂದು ಗುರುತಿಸಲಾಗಿದೆ. ಸೋಮವಾರದಂದು ರಾತ್ರಿ ಇಬ್ಬರು ಯುವಕರು ಕೂಡಗಿ ಗ್ರಾಮದಿಂದ ಚೀರಲದಿನ್ನಿ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಯಾವುದೇ ಪಾರ್ಕಿಂಗ್ ಲೈಟ್ ಇಲ್ಲದೇ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನಿಲ್ಲಿಸಲಾಗಿತ್ತು. ಈ ಸಂದರ್ಭ ಕತ್ತಲಲ್ಲಿ ಟ್ರ್ಯಾಕ್ಟರ್ ನಿಂತಿರುವುದು ಕಾಣದೇ ಬೈಕ್ ಢಿಕ್ಕಿ ಹೊಡೆದಿದೆ. ಈ ಕುರಿತು ಕೂಡಗಿ ಎನ್.ಟಿ.ಪಿ.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top