ಮಂಗಳೂರು: ಖಾಸಗಿ ಟಿವಿ ವರದಿಗಾರ ಸುಖ್ ಪಾಲ್ ಪೊಳಲಿ ಮೇಲೆ ರಾಡ್ ನಿಂದ ಹಲ್ಲೆ ➤ ಆರೋಪಿ ಅಂದರ್



(ನ್ಯೂಸ್ ಕಡಬ) newskadaba.com ಮಂಗಳೂರು, ನ. 23. ಖಾಸಗಿ ಟಿವಿ ವರದಿಗಾರರಾಗಿರುವ ಸುಖ್ ಪಾಲ್ ಪೊಳಲಿ ಯವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.







ಬಂಧಿತ ಆರೋಪಿಯನ್ನು ಯದುನಂದನ್ ಎಂದು ಗುರುತಿಸಲಾಗಿದೆ. ಈತ ಸುಖ್ ಪಾಲ್ ಪೊಳಲಿ ಎಂಬವರಿಗೆ ಸೋಮವಾರದಂದು ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ತಲೆಗೆ ಪೆಟ್ಟಾದ ಸುಖ್ ಪಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಈ ಕುರಿತು ಆರೋಪಿ ವಿರುದ್ದ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.






error: Content is protected !!
Scroll to Top