ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ನೆಲ್ಯಾಡಿ: ವಿಷ ಪದಾರ್ಥ ಸೇವಿಸಿ ಪತಿ-ಪತ್ನಿ ಅಸ್ವಸ್ಥ; ಪತ್ನಿ ಮೃತ್ಯು ➤ ವಿಷಯ ತಿಳಿಯುತ್ತಲೇ ಪತಿ ಆಸ್ಪತ್ರೆಯಿಂದ ಎಸ್ಕೇಪ್..! – News Kadaba

ನೆಲ್ಯಾಡಿ: ವಿಷ ಪದಾರ್ಥ ಸೇವಿಸಿ ಪತಿ-ಪತ್ನಿ ಅಸ್ವಸ್ಥ; ಪತ್ನಿ ಮೃತ್ಯು ➤ ವಿಷಯ ತಿಳಿಯುತ್ತಲೇ ಪತಿ ಆಸ್ಪತ್ರೆಯಿಂದ ಎಸ್ಕೇಪ್..!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 13. ಕೆಲ ದಿನಗಳ ಹಿಂದೆ ವಿಷ ಸೇವನೆ ಮಾಡಿ ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಇಚ್ಲಂಪಾಡಿಯ ಮಹಿಳೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ.


ಮೃತರನ್ನು ಇಚ್ಚಂಪಾಡಿ ಗ್ರಾಮದ ನಿಡ್ಯಡ್ಕ ನಿವಾಸಿ ವೆಂಕಟೇಶ್ ಎಂಬವರ ಪತ್ನಿ ಸೌಮ್ಯ (36) ಎಂದು ಗುರುತಿಸಲಾಗಿದೆ. ಗೋಳಿಯಡ್ಕದ ಬೀಜದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸೌಮ್ಯ, ನ. 09ರಂದು ಸಂಜೆ ಮನೆಯಲ್ಲಿ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು, ಇದರ ಬೆನ್ನಲ್ಲೇ ಆಕೆಯ ಪತಿ ವೆಂಕಟೇಶ್ ಕೂಡಾ ಇಲಿ ಪಾಷಣ ಸೇವಿಸಿದ್ದರು ಎನ್ನಲಾಗಿದೆ. ಇವರಿಬ್ಬರನ್ನೂ ಸ್ಥಳೀಯರು ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಪೈಕಿ ಸೌಮ್ಯ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನ.10 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ನ.11ರಂದು ರಾತ್ರಿ ನಿಧನರಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪತಿ ವೆಂಕಟೇಶ್ ಅಲ್ಲಿಂದ ನ. 12ರಂದು ಎಸ್ಕೇಪ್ ಆಗಿದ್ದ ಎಂದು ಹೇಳಲಾಗಿದೆ. ತಕ್ಷಣವೇ ಅಲ್ಲಿನ ವೈದ್ಯರು ಪುತ್ತೂರು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಲ್ಲಿಂದ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ತಮಿಳುನಾಡಿಗೆ ಪರಾರಿಯಾಗುವ ನಿಟ್ಟಿನಲ್ಲಿ ವೆಂಕಟೇಶ್ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ತೆರಳಿರುವ ಕುರಿತು ಮಾಹಿತಿ ಪಡೆದುಕೊಂಡ ಉಪ್ಪಿನಂಗಡಿ ಪೊಲೀಸರು ವೆಂಕಟೇಶ್‌ ನನ್ನು ಅಲ್ಲಿಂದ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Scroll to Top