ಹೊಳೆಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ನ. 09. ಸಮೀಪದ ಕೊಕ್ಕರ್ಣೆ ಪೆಜಮಂಗೂರು ಗ್ರಾಮದ ಗುಂಡಾಲು ಕಿಂಡಿ‌ ಅಣೆಕಟ್ಟಿನ‌ ಬಳಿ ಸೀತಾ ನದಿಯಲ್ಲಿ ನವಜಾತ ಗಂಡು ಮಗುವಿನ‌ ಮೃತದೇಹವೊಂದು ಪತ್ತೆಯಾಗಿದೆ.

ಕಳೆದ ಎರಡು ದಿನಗಳ ಹಿಂದೆ ನದಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ. ಈ ನವಜಾತ ಶಿಶುವಿನ ಮೃತದೇಹದಲ್ಲಿ ಹೊಕ್ಕುಳ ಬಳ್ಳಿ ಕೂಡಾ ಇದ್ದು, ಮಗುವಿನ‌ ತಲೆ‌ ಮತ್ತು ದೇಹದ ಕೆಲವೆಡೆ ಮೀನುಗಳು ತಿಂದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

Scroll to Top