ಬೆಳ್ತಂಗಡಿ: ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು



(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 09. ಹಳ್ಳ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಲವಂತಿಗೆ ಎಂಬಲ್ಲಿ ನಡೆದಿದೆ.







ಮೃತಪಟ್ಟವರನ್ನು ಇಲ್ಲಿನ ನಿವಾಸಿ ಹಿರಿಮಾರು ನಿವಾಸಿ ಕಿನ್ನಿ ಗೌಡರ ಪುತ್ರ ಗಣೇಶ್ (40) ಎಂದು ಗುರುತಿಸಲಾಗಿದೆ. ಇವರು ತಮ್ಮ ತೋಟದಿಂದ ಅಡಕೆ ಹೆಕ್ಕಿ ಮರಳುವ ವೇಳೆ ಮಲ್ಲಕಜಕ್ಕೆ ಎಂಬಲ್ಲಿ ಹಳ್ಳ ದಾಟುವಾಗ ಕಾಲುಜಾರಿ ರಭಸವಾಗಿ ಹರಿಯುವ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದರು. ಬಳಿಕ ಸ್ಥಳೀಯರು ಶೋಧ ನಡೆಸಿ ತುಸು ದೂರದ ಕಲ್ಲುಬಂಡೆಯ ಸಂದಿನಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top