ಎಡಮಂಗಲ: ಬಿರುಕು ಬಿಟ್ಟ ರೈಲ್ವೇ ಹಳಿ ➤ ಚಾಲಕನ ಪ್ರಜ್ಞೆಯಿಂದ‌ ತಪ್ಪಿದ ಅನಾಹುತ

(ನ್ಯೂಸ್ ಕಡಬ) Newskadaba.com ಕಾಣಿಯೂರು, ಅ. 26. ಸುಬ್ರಹ್ಮಣ್ಯ- ಮಂಗಳೂರು ರೈಲ್ವೇಯ ಎಡಮಂಗಲ ಎಂಬಲ್ಲಿ ಹಳಿ ಬಿರುಕು ಬಿಟ್ಟಿದ್ದು, ರೈಲು ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಮುಂಜಾನೆ ವೇಳೆ ಸಂಚರಿಸುವ ಬೆಂಗಳೂರು- ಕಾರವಾರ ರೈಲು ಸುಬ್ರಹ್ಮಣ್ಯ- ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಎಡಮಂಗಲ ಸಮೀಪ ರೈಲ್ವೇ ಹಳಿ ಬಿರುಕು ಬಿಟ್ಟಿದ್ದು, ರೈಲಿನ ಒಂದು ಬೋಗಿ ಚಲಿಸಿದ ಕೂಡಲೇ ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಚಾಲಕ ರೈಲನ್ನು ನಿಲುಗಡೆಗೊಳಿಸಿ, ರೈಲ್ವೇ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಬಳಿಕ ಹಳಿ ರಿಪೇರಿ ನಡೆಸಿ, ಬಳಿಕ ರೈಲು ಸಂಚರಿಸಲು ಅವಕಾಶ ನೀಡಲಾಯಿತು.

Scroll to Top