(ನ್ಯೂಸ್ ಕಡಬ) Newskadaba.com ಕಡಬ, ಅ.13. ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಉಂಟಾದ ಘಟನೆ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಹಳೆನೂಜಿ ಎಂಬಲ್ಲಿ ಮಂಗಳವಾರದಂದು ಸಂಭವಿಸಿದೆ.

ಹಳೆನೂಜಿ ಬಾಬು ಗೌಡರ ಮಗ ಹೊನ್ನಪ್ಪ ಗೌಡ ಎಂಬವರು ವಾಸವಿದ್ದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಘಟನೆಯಲ್ಲಿ ಕೊಠಡಿಯ ಪೀಠೋಪಕರಣ, ಕೊಠಡಿಯಲ್ಲಿದ್ದ ಮೂರು ಕ್ವಿಂಟಾಲ್ ಗೂ ಅಧಿಕ ರಬ್ಬರ್, ಒಂದು ಸಾವಿರ ತೆಂಗು, ಅಡಿಕೆ, ಕರಿಮೆಣಸು, ಪೈಪ್ ಹಾಗೂ ಇತರೆ ಸಾಮಾಗ್ರಿಗಳು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ವಿನಯ ಕುಮಾರಿ ಬಳಕ್ಕ, ಚಂದ್ರಶೇಖರ ಗೌಡ ಹಳೆನೂಜಿ, ಗ್ರಾ.ಪಂ. ಕಾರ್ಯದರ್ಶಿ ಗುರುವ ಎಸ್, ಕಂದಾಯ ಇಲಾಖೆಯ ಹರೀಶ್, ಗ್ರಾ.ಪಂ. ಸಿಬ್ಬಂದಿ ಧನರಾಜ್ ಬೇಟಿ ನೀಡಿದರು.










