ಪ್ರಚೋದನೆಯನ್ನು ಪ್ರಬುದ್ದತೆಯಿಂದ ಎದುರಿಸೋಣ ➤ ಇಕ್ಬಾಲ್ ಬಾಳಿಲ

(ನ್ಯೂಸ್ ಕಡಬ) Newskadaba.com ಅ.‌ 12. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಹಿಂದೂ- ಮುಸ್ಲಿಮರಲ್ಲಿ ಒಡಕುಂಟು ಮಾಡಲು ಸಾಧ್ಯವಿಲ್ಲ. ಇಂತಹ ಹೇಳಿಕೆಗಳನ್ನು ಖಂಡಿಸುತ್ತೇವೆ ಅಲ್ಲದೇ, ಪ್ರಚೋದನೆಗಳನ್ನು ಪ್ರಬುದ್ಧತೆಯಿಂದ ಎದುರಿಸೋಣ ಎಂದು SKSSF ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಹೇಳಿದರು.

ಅವರು ಇಂದು SKSSF ಸುಳ್ಯ ವಲಯ ಸಮಿತಿ ವತಿಯಿಂದ ನಡೆದ ಮುಸ್ಲಿಂ ಸಮುದಾಯದ ವಿರುದ್ದ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಪ್ರಚೋದನಕಾರಿ ಹೇಳಿಕೆ ಮತ್ತು ಪ್ರವಾದಿ (ಸ.ಅ) ರವರ ನಿಂದನೆಯ ವಿರುದ್ದ ಸುಳ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಗೈದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರೂ, ಕಾಂಗ್ರೆಸ್ ಮುಖಂಡರೂ ಆದ ಟಿ.ಎಂ ಶಹೀದ್ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯತ್ ಸದಸ್ಯ ಉಮರ್ ಕೆ.ಎಸ್ ಮಾತನಾಡಿದರು.

Also Read  ಆನ್ ಲೈನ್ ಆಟಕ್ಕೆ ತೊಡಗಿಸಲು ಮನೆಗೆ ನುಗ್ಗಿ 1.50 ಲಕ್ಷ ರೂ. ನಗದು ಕಳವುಗೈದ ವಿದ್ಯಾರ್ಥಿ..!


ಕಾರ್ಯಕ್ರಮದಲ್ಲಿ SKSSF ಸುಳ್ಯ ವಲಯ ಕಾರ್ಯದರ್ಶಿ ಅಕ್ಬರ್ ಕರಾವಳಿ, ಮದ್ರಸ ಮೇನೇಜ್ಮೆಂಟ್ ಕೋಶಾಧಿಕಾರಿ ಹಮೀದ್ ಹಾಜಿ, ಶಂಸುಲ್ ಉಲಮಾ ಟ್ರಸ್ಟ್ ಮುಖಂಡರಾದ ಅಬೂಬಕ್ಕರ್ ಬೆಳ್ಳಾರೆ, ಅಬ್ದುಲ್ ಖಾದರ್ ಬಾಯಂಬಾಡಿ, ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಖಾದರ್ ಫೈಝಿ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಹಾಜಿ ಇಬ್ರಾಹಿಂ ಮಂಡೆಕೋಲು, ಅಡ್ವಕೇಟ್ ಫವಾಝ್, ಸುಳ್ಯ ವಿಖಾಯ ಚೇರ್ಮನ್ ಷರೀಫ್ ಅಜ್ಜಾವರ ಉಪಸ್ಥಿತರಿದ್ದರು. ಸುಳ್ಯ ವಲಯಾಧ್ಯಕ್ಷ ಜಮಾಲ್ ಬೆಳ್ಳಾರೆ ಸ್ವಾಗತಿಸಿ ವಂದಿಸಿದರು. ಬಶೀರ್ ಯು.ಪಿ ನಿರೂಪಿಸಿದರು.

Also Read  ರಸ್ತೆ ಅಪಘಾತಕ್ಕೆ ಮಹಿಳೆ ಬಲಿ, ಏಳು ಮಂದಿಗೆ ಗಾಯ

error: Content is protected !!
Scroll to Top