ಪೇಟೆಗೆಂದು ತೆರಳಿದ್ದ ವ್ಯಕ್ತಿ ಮನೆಗೆ ಬಾರದೆ ನಾಪತ್ತೆ



(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.23. ತಲೆಗೂದಲು ತೆಗೆಸಲೆಂದು ಪೇಟೆಗೆ ತೆರಳಿದ ವ್ಯಕ್ತಿಯೋರ್ವರು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ.







ನಾಪತ್ತೆಯಾದ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಕಲ್ಲಟ ನಿವಾಸಿ ತಿಮ್ಮಪ್ಪ ಎಂದು ಗುರುತಿಸಲಾಗಿದೆ. ವಿಪರೀತ ಅಮಲು ಪದಾರ್ಥ ಸೇವನೆಯ ಚಟವನ್ನು ಹೊಂದಿದ್ದ ಇವರು ಸೆಪ್ಟೆಂಬರ್ 08 ರಂದು ಕೂದಲು ತೆಗೆಸಲೆಂದು ಪೇಟೆಗೆ ಹೋದವರು ಹಿಂತಿರುಗಿಲ್ಲ ಎನ್ನುತ್ತಾರೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಲಾಗಿದೆ.






 

 

 

error: Content is protected !!
Scroll to Top