ಕಡಬ: ಮಿದುಳಿನ ರಕ್ತಸ್ರಾವದಿಂದ 11 ವರ್ಷದ ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಆ.27. ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿ 11 ವರ್ಷದ ಬಾಲಕಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ಶುಕ್ರವಾರದಂದು ನಡೆದಿದೆ.

ಮೃತ ಬಾಲಕಿಯನ್ನು ಕುಂತೂರು ಗ್ರಾಮದ ಮಣಿಕ್ಕಳ ನಿವಾಸಿ ಸೋಮನಾಥ ಗೌಡ – ಕುಸುಮಾವತಿ ದಂಪತಿಯ ಪುತ್ರಿ ಅಪೇಕ್ಷಾ ಎಂದು ಗುರುತಿಸಲಾಗಿದೆ. ಕಳೆದ ಕೆಲವು ಸಮಯಗಳಿಂದ ತಲೆನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಶುಕ್ರವಾರ ಬೆಳಿಗ್ಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವ ಹಾದಿ ಮಧ್ಯೆ ಪ್ರಾಣ ಪಕ್ಷಿ ಹಾರಿ ಹೋಗಿದೆ. ಬಾಲಕಿಯ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

 

 

 

Scroll to Top