ಆನ್‌ಲೈನ್ ತರಗತಿಯ ಅವಾಂತರ ➤ ಕಾಲೇಜಿಗೆಂದು ತೆರಳಿದ ಅಪ್ರಾಪ್ತ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ.06. ಮೊಬೈಲ್ ಮೂಲಕ ಹುಟ್ಟಿಕೊಂಡ ಪ್ರೀತಿಯಿಂದ ಅಪ್ರಾಪ್ತ ಯುವತಿಯು ಸ್ಥಳೀಯ ಯುವಕನ ಜೊತೆ ನಾಪತ್ತೆಯಾಗಿರುವ ಘಟನೆ ಕಡಬ ಸಮೀಪದ ಕಳಾರದಿಂದ ವರದಿಯಾಗಿದೆ.

ಕಳಾರ ನಿವಾಸಿ ಹದಿನೇಳು ವರ್ಷದ ಯುವತಿಯು ಗುರುವಾರದಂದು ಕಾಲೇಜಿಗೆಂದು ಮನೆಯಿಂದ ತೆರಳಿದ್ದು, ಸಂಜೆಯವರೆಗೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡಿಕಾಡಿದ ಆಕೆಯ ಮನೆಯವರು ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಇಂದು ಕಡಬ ಠಾಣೆಗೆ ದೂರು ನೀಡಿದ್ದಾರೆ. ಇದೇ ವೇಳೆ ಸ್ಥಳೀಯ ನಿವಾಸಿ 24 ವರ್ಷದ ಹನೀಫ್ ಎಂಬಾತ ನಾಪತ್ತೆಯಾಗಿದ್ದು, ಇಬ್ಬರೂ ಜೊತೆಯಾಗಿ ತೆರಳಿರುವ ಸಂಶಯ ವ್ಯಕ್ತವಾಗಿದೆ. ಇದೀಗ ನಾಪತ್ತೆಯಾದವರ ಪತ್ತೆಗೆ ಕಡಬ ಪೊಲೀಸರು ಬಲೆ ಬೀಸಿದ್ದಾರೆ. ಆನ್‌ಲೈನ್ ತರಗತಿಯ ನೆಪದಲ್ಲಿ ಮೊಬೈಲ್ ಅವಾಂತರದಿಂದ ಇವರು ಜೊತೆಯಾಗಿ ತೆರಳಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

 

 

 

 

Scroll to Top