ಕಡಬ: ಜೀಪ್ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ ➤ ಜೀಪ್ ಸಂಪೂರ್ಣ ಜಖಂ

(ನ್ಯೂಸ್ ಕಡಬ) newskadaba.com ಕಡಬ, ಜು.15. ಭಾರೀ ಗಾಳಿ ಮಳೆಗೆ ನಿಲ್ಲಿಸಿದ್ದ ಜೀಪ್ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಜೀಪ್ ಸಂಪೂರ್ಣ ಜಖಂಗೊಂಡ ಘಟನೆ ಕಡಬ ತಾಲೂಕಿನ ಕೊಂಬಾರು ಎಂಬಲ್ಲಿ ನಡೆದಿದೆ.

ಕೊಂಬಾರು ನಿವಾಸಿ ಕಿರಣ್ ಎಂಬವರಿಗೆ ಸೇರಿದ ಟೂರಿಸ್ಟ್ ಜೀಪ್ ಮನೆ ಸಮೀಪ ನಿಲ್ಲಿಸಿದ್ದ ವೇಳೆ ಪಕ್ಕದ ಧರೆಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಬುಡದಿಂದ ಉರುಳಿ ಜೀಪ್ ಮೇಲೆ ಬಿದ್ದಿದೆ. ಘಟನೆಯಲ್ಲಿ ಜೀಪ್ ನಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.

 

 

 

Scroll to Top