ಕಡಬ: ರಿಕ್ಷಾ ಚಾಲಕನಿಂದ ಅತ್ಯಾಚಾರ ➤ ಯುವತಿ ಎಂಟು ತಿಂಗಳ ಗರ್ಭಿಣಿ

(ನ್ಯೂಸ್ ಕಡಬ) newskadaba.com ಕಡಬ, ಜೂ.17. ರಿಕ್ಷಾ ಚಾಲಕನೋರ್ವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ನಿರಂತರ ಅತ್ಯಾಚಾರ ಎಸಗಿದ ಹಿನ್ನೆಲೆಯಲ್ಲಿ ಆಕೆ ಗರ್ಭಿಣಿಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲದಿಂದ ವರದಿಯಾಗಿದೆ.

ಕೊಯಿಲ ಗ್ರಾಮದ ಬುಡಲೂರು ನಿವಾಸಿ ರಿಕ್ಷಾ ಚಾಲಕ ಯುವರಾಜ್ ಎಂಬಾತ ತನ್ನ ಪರಿಚಯದ 19 ವರ್ಷದ ಯುವತಿಯನ್ನು ಕಳೆದೊಂದು ವರ್ಷದಿಂದ ಆತನ ಮನೆಯ ಸಮೀಪದ ಗುಡ್ಡದಲ್ಲಿ ನಿರಂತರವಾಗಿ ಅತ್ಯಾಚಾರಗೈದಿದ್ದಾನೆ ಎನ್ನಲಾಗಿದೆ. ಯುವತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಮನೆಯವರು ಆಕೆಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಆಕೆ ಎಂಟು ತಿಂಗಳ ಗರ್ಭಿಣಿಯಾಗಿ ಇರುವುದು ತಿಳಿದು ಬಂದಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

Scroll to Top