ದುಷ್ಕರ್ಮಿಗಳ ಗುಂಡಿಗೆ ಗೃಹಿಣಿ ಬಲಿ ►2 ವರ್ಷದ ಮಗುವಿನ ಮುಂದೆ ಕೊಲೆಯಾದ ತಾಯಿ..!!!

(ನ್ಯೂಸ್ ಕಡಬ) newskadaba.com ನವದೆಹಲಿ, ಅ.25.  ಮಹಿಳೆಯೊಬ್ಬರು ತನ್ನ ಪತಿ, ಹಾಗೂ 2 ವರ್ಷದ ಮಗುವಿನ ಮುಂದೆಯೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಘಟನೆ ಪಶ್ಚಿಮ ದೆಹಲಿ ರೋಹಿಣಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಪ್ರಿಯಾ ಮೆಹ್ರಾ (30) ಕೊಲೆಯಾದ ಗೃಹಿಣಿ. ಬುಧವಾರ ನಸುಕಿನ ಜಾವ 4 ಗಂಟೆಗೆ ಗುರುದ್ವಾರದಿಂದ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಗುರುದ್ವಾರದಿಂದ ರೋಹಿಣಿಯಲ್ಲಿರುವ ತಮ್ಮ ಮನೆಗೆ ಪತಿ ಪಂಕಜ್ ಜೊತೆ ಮಾರುತಿ ರಿಟ್ಜ್ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ವೇಗವಾಗಿ ಬಂದು ಅವರ ಕಾರನ್ನು ಹಿಂದಿಕ್ಕಿ ಅವರ ಮುಂದೆ ಬಂದಿದ್ದಾರೆ. ನಂತರ ಏಕಾಏಕಿ ಪಂಕಜ್ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಡ್ರೈವರ್ ಸೀಟ್ ನಲ್ಲಿದ್ದ ಪಂಕಜ್ ಗುಂಡಿನ ಶಬ್ಧಕ್ಕೆ ಕಾರಿನ ಕೆಳಗೆ ಬಗ್ಗಿದ್ದಾರೆ. ಆದರೆ ಪತ್ನಿ ಪ್ರಿಯಾಗೆ ಕುತ್ತಿಗೆ ಮತ್ತು ಮುಖಕ್ಕೆ ಗುಂಡುಗಳು ಬಿದಿದ್ದು, ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಪ್ರಿಯಾ ಸಾವನ್ನಪ್ಪಿದ್ದಾರೆ. ಆದರೆ ಪಂಕಜ್ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಡಿಸಿಪಿ ಮಿಲಿಂದ್ ದುಂಬೇರೆ ಅವರು ತಿಳಿಸಿದರು.

Also Read  ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಬಿಗ್ ರಿಲೀಫ್

ಮೂವರು ದುಷ್ಕರ್ಮಿಗಳು ನನ್ನನ್ನು ಗುರಿಯಾಗಿಕೊಂಡು ಗುಂಡು ಹಾರಿಸಿದರು. ಆದರೆ ನಾನು ತಪ್ಪಿಸಿಕೊಂಡೆ. ಆದರೆ ನನ್ನ ಪತ್ನಿ ಪ್ರಿಯಾಗೆ ಗಂಡೇಟು ಬಿದ್ದು, ಮೃತಪಟ್ಟಿದ್ದಾಳೆ ಎಂದು ಪತಿ ಪೊಲೀಸರಿಗೆ ತಿಳಿಸಿದ್ದಾರೆ.

ಬಡ್ಡಿದಾರರ ಬಳಿ ಸುಮಾರು 5 ಲಕ್ಷ ರೂ. ಸಾಲವನ್ನು ಪಡೆದಿದ್ದೆ. ಆದರೆ ಅದನ್ನು ಹಿಂದಿರುಗಿಸಲು ತಡವಾಗಿದ್ದರಿಂದ ಬಡ್ಡಿ ಕೊಟ್ಟವರು ಚಕ್ರ ಬಡ್ಡಿ ಸೇರಿಸಿ 40 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಮೊತ್ತದ ಹಣವನ್ನು ನೀಡಲು ನಾನು ನಿರಾಕರಿಸಿದ್ದೆ. ಈ ಕಾರಣಕ್ಕೆ ಈ ದಾಳಿ ನಡೆದಿರಬಹುದು ಎಂದು ಪಂಕಜ್ ನಮ್ಮ ಬಳಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ವಕ್ಫ್ ತಿದ್ದುಪಡಿ ಮಸೂದೆ- 1.2 ಕೋಟಿ ಈಮೇಲ್ ಸ್ವೀಕರಿಸಿದ ಸಂಸದೀಯ ಸಮಿತಿ

 

error: Content is protected !!
Scroll to Top