ಕೊರೋನಾ ಸೋಂಕಿಗೆ ಕಡಬದಲ್ಲಿ ಮತ್ತೊಂದು ಬಲಿ ➤ 63 ವರ್ಷದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಮೇ. 24. ಕೊರೋನಾ ಸೋಂಕಿನ ಎರಡನೇ ಅಲೆಗೆ ಕಡಬ ತಾಲೂಕಿನ ಮಹಿಳೆಯೋರ್ವರು ಮೃತಪಟ್ಟಿದ್ದಾರೆ‌.

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ಸಮೀಪದ ಚೆಂಡೆಹಿತ್ಲು ನಿವಾಸಿ 63 ವರ್ಷದ ಮಹಿಳೆಯನ್ನು ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯು ಮೃತಪಟ್ಟಿದ್ದಾರೆ‌. ಈ ಮೂಲಕ ಬಿಳಿನೆಲೆ ಗ್ರಾಮ ವ್ಯಾಪ್ತಿಯಲ್ಲಿ ಮೊದಲ ಬಲಿಯಾಗಿದೆ.

 

 

 

Scroll to Top