ಪಂಜದ ವೈದ್ಯರ ಕಾರ್ ಕ್ರೇಝ್ ➤ ವರ್ಷಂಪ್ರತಿ ಹೊಸ ಕಾರ್ ಖರೀದಿ | ಈ ವರ್ಷ ಬಂತು ಇಲೆಕ್ಟ್ರಿಕ್ ಕಾರ್

(ನ್ಯೂಸ್ ಕಡಬ) newskadaba.com ಕಡಬ, ಮೇ.15. ಪ್ರತೀವರ್ಷ ಹೊಸ ಹೊಸ ಕಾರ್ ಖರೀದಿಸುವ ಮೂಲಕ ಕಾರ್ ಕ್ರೇಝ್ ಹೊಂದಿರುವ ಪಂಜದ ಪಶು ವೈದ್ಯ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಡಾ| ದೇವಿಪ್ರಸಾದ್ ಕಾನತ್ತೂರ್ ಈ ವರ್ಷ ಹೊಸ ಟಾಟಾ ನೆಕ್ಸಾನ್ ಇಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.

ಪ್ರತೀ ವರ್ಷ ಬೇರೆ ಬೇರೆ ಕಂಪೆನಿಯ ವಿಭಿನ್ನ ಆವೃತ್ತಿಯ ಕಾರನ್ನು ಖರೀದಿಸುವ ಇವರು ಕಳೆದ ಜೆಲವು ಸಮಯಗಳ ಹಿಂದೆ ದೇಶೀ ಉತ್ಪಾದಿತ ಹೊಗೆ, ಶಬ್ದ ರಹಿತ‌‌ ಪರಿಸರ ಸ್ನೇಹಿ ಟಾಟಾ ಕಂಪೆನಿಯ ನೆಕ್ಸಾನ್ ಇಲೆಕ್ಟ್ರಿಕ್ ಕಾರನ್ನು ಬುಕ್ ಮಾಡಿದ್ದರು‌. ಒಂದು ಸಲ ಚಾರ್ಜ್ ಮಾಡಿದರೆ ಸುಮಾರು 320 ಕಿ.ಮೀ. ಓಡುವ ಈ ಕಾರನ ಬ್ಯಾಟರಿಗೆ ಕಂಪೆನಿಯು 8 ವರ್ಷ ವಾರೆಂಟಿ ನೀಡಿದೆ. ಪೆಟ್ರೋಲ್ – ಡೀಸೆಲ್ ದರ ಗಗನಕ್ಕೆ ಏರುತ್ತಿರುವ ಸಂದರ್ಭದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರಿನಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಸಂಚರಿಸಬಹುದಾಗಿದೆ. ಇದೀಗ ಅವರ ಪುತ್ರ ಮಂಗಳೂರಿನ ಕಾರ್ ಕಾರ್ಡಿಯಾಕ್ ಕೇರ್ ಮಾಲಕ ಪುನೀತ್ ಕಾನತ್ತೂರ್ ಅವರು ಕೂಡಾ ಟಾಟಾ ನೆಕ್ಸಾನ್ ಇಲೆಕ್ಟ್ರಿಕ್ ಕಾರನ್ನು ಬುಕಿಂಗ್ ಮಾಡಿದ್ದು, ಕೆಲವೇ ದಿನಗಳಲ್ಲಿ ದೊರೆಯಲಿದೆ.

Also Read  ಕೊಂಬಾರು ಗ್ರಾಮಸ್ಥರಿಗೆ ಕೊನೆಗೂ ಬಂತು ನೆಟ್ವರ್ಕ್ ಭಾಗ್ಯ ➤ ಕೊಂಬಾರು ಹಾಗೂ ಸಿರಿಬಾಗಿಲಿನಲ್ಲಿ ಜಿಯೋ ಟವರ್ ಗೆ ಸಾಂಕೇತಿಕ ಚಾಲನೆ

 

 

 

error: Content is protected !!
Scroll to Top