ನೀರಿನಲ್ಲಿ ಮುಳುಗಿ ಮೂವರು ಮಕ್ಕಳು ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ಎ. 08. ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳು ದಾರಣವಾಗಿ ಮೃತಪಟ್ಟ ಘಟನೆ ಪಾಂಡವಪುರ ತಾಲೂಕಿನ ಬಳ್ಳೇಅತ್ತಿಗುಪ್ಪೆ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರನ್ನು ಮಹದೇವಪ್ಪ ಎಂಬವರ ಮಕ್ಕಳಾದ ಚಂದನ್, ಕಾರ್ತಿಕ್ ಹಾಗೂ ಮಲ್ಲಿಕಾರ್ಜುನ ಎಂಬವರ ಪುತ್ರ ರಿತೇಶ್ ಎಂದು ಗುರುತಿಸಲಾಗಿದೆ. ಈ ಮೂವರು ಯಾರು ಇಲ್ಲದ ಸಮಯದಲ್ಲಿ ಸ್ನೇಹಿತರೊಂದಿಗೆ ಈಜಲೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತೋಟದ ಬಳಿ ಹೋದ ಮಹದೇವಪ್ಪ ಕೃಷಿ ಹೊಂಡದಲ್ಲಿ ತೇಲುತ್ತಿದ್ದ ಮಕ್ಕಳ ಮೃತದೇಹವು ಕಂಡು ಗಾಬರಿಯಿಂದ ಕಿರುಚಾಡಿದ್ದು, ಅಕ್ಕಪಕ್ಕದ ತೋಟದಲ್ಲಿದ್ದ ಕೆಲಸಗಾರರು ಬಂದು ಮೃತದೇಹವನ್ನು ಮೇಲೆತ್ತುವಲ್ಲಿ ಸಹಕರಿಸಿದ್ದಾರೆ. ಈ ಕುರಿತು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Also Read  ಡಿಕೆ. ಶಿವಕುಮಾರ್ ವಿರುದ್ಧ ಕೇಸ್: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಬಿಐ

error: Content is protected !!
Scroll to Top