ಪುತ್ತೂರು: ಮೊದಲು ಮೊಬೈಲ್ ಸುಟ್ಟು, ಬಳಿಕ ಆತ್ಮಹತ್ಯೆಗೆ ಶರಣಾದ ಅಟೋ ಚಾಲಕ…!

(ನ್ಯೂಸ್ ಕಡಬ) newskadaba.com ಪುತ್ತೂರು, ಎ. 09. ಆಟೋ ಚಾಲಕರೋರ್ವರು ಮೊದಲು ತನ್ನ ಮೊಬೈಲ್ ನ್ನು ಸುಟ್ಟು ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೈದವರನ್ನು ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ಶಿವಪ್ರಸಾದ್ (28 ವ) ಎಂದು ಗುರುತಿಸಲಾಗಿದೆ. ಇವರು ಮೊದಲು ತನ್ನ ಮೊಬೈಲ್ ನ್ನು ಸುಟ್ಟು ಬಳಿಕ ಮನೆಯ ಕೋಣೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ . ಸ್ಥಳಕ್ಕೆ ಸಂಪ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Scroll to Top