ರಸ್ತೆ ಮಧ್ಯೆಯೇ ಪಂಕ್ಚರ್ ಆದ 108 ಆಂಬ್ಯಲೆನ್ಸ್..! ➤ ಚಿಕಿತ್ಸೆ ಸಿಗದೆ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಎ. 03. 108 ಆ್ಯಂಬ್ಯುಲೆನ್ಸ್ ಒಂದು ಪಂಕ್ಚರ್ ಆದ ಪರಿಣಾಮ ರೋಗಿಯೋರ್ವ ಮಾರ್ಗ ಮಧ್ಯದಲ್ಲೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಅಂಕೋಲದಲ್ಲಿ ನಡೆದಿದೆ.

ರೋಶನ್ (19) ಎಂಬ ಯುವಕನೋರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ​​ ಅಂಕೋಲದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಆಂಬುಲೆನ್ಸ್‌ನ ಹಿಂದಿನ ಚಕ್ರ ಪಂಕ್ಚರ್ ಆಗಿದೆ. ಅಲ್ಲದೇ ಆಂಬುಲೆನ್ಸ್‌ನಲ್ಲಿ ಮತ್ತೊಂದು ಸ್ಟೆಪ್ನಿ ಕೂಡಾ ಇರಲಿಲ್ಲ. ಹೀಗಾಗಿ ಯುವಕ ರೋಶನ್ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾನೆ.

Also Read  ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ..! ➤ ನವಜೋಡಿ  ಸ್ಥಳದಲ್ಲೇ ಮೃತ್ಯು

error: Content is protected !!
Scroll to Top