ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಮಾ. 15ರಂದು ಚುನಾವಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 20. ವಿಧಾನ ಪರಿಷತ್ ನ ಉಪ ಸಭಾಪತಿಯಾಗಿದ್ದ ದಿ/ ಎಸ್.ಎಲ್ ಧರ್ಮೇಗೌಡ ಅವರ ನಿಧನದಿಂದಾಗಿ ತೆರವಾಗಿದ್ದ ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಮಾ. 15ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.


ಉಪಚುನಾವಣೆಗೆ ಅಧಿಸೂಚನೆಯನ್ನು ಫೆ. 25ರಂದು ನೀಡಲಾಗುವುದು. ಇದಕ್ಕೆ ನಾಮಪತ್ರ ಸಲ್ಲಿಸಲು ಮಾ. 04 ಕೊನೆಯ ದಿನ ಹಾಗೂ ನಾಮಪತ್ರ ಹಿಂಪಡೆಯಲು ಮಾ. 08 ಕೊನೆಯ ದಿನವೆಂದು ಆಯೋಗ ತಿಳಿಸಿದೆ.

Scroll to Top