ಮಂಗಳೂರು: ಫೆ. 05ರಂದು ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ಶ್ರೀ ಭಾರತೀ ಸಮೂಹ ಸಂಸ್ಥೆಗಳು ಮಂಗಳೂರು, ಮಂಗಳೂರು ಹವ್ಯಕ ಸಭಾ (ರಿ.) ಚೂಂತಾರು ಸರೋಜಿನಿ ಪ್ರತಿಷ್ಠಾನ  (ರಿ.) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ  ರಕ್ತದ ಬ್ಯಾಂಕ್ ತೇಜಸ್ವಿನಿ ಆಸ್ಪತ್ರೆ  ಕದ್ರಿ ಮಂಗಳೂರು  ಇದರ ಸಹಕಾರದೊಂದಿಗೆ ಫೆ. 05 ಶುಕ್ರವಾರದಂದು ಶ್ರೀ ಭಾರತೀ ಕಾಲೇಜು, ನಂತೂರು ಮಂಗಳೂರು ಇಲ್ಲಿ  ಬೆಳಗ್ಗೆ 9.30 ರಿಂದ 12.30 ರವರೆಗೆ ರಕ್ತದಾನ ಶಿಬಿರ ನಡೆಯಲಿರುವುದು.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಕಾರ್ಯಕ್ರಮ ಆಯೋಜಕರು ಮತ್ತು ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ.) ಮಂಗಳೂರು ಇದರ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top