(ನ್ಯೂಸ್ ಕಡಬ) newskadaba.com ನವದೆಹಲಿ, ಜ.17. ಹೊಸ ಪ್ರೈವೆಸಿ ಪಾಲಿಸಿ ಹೊರತರಲು ಉದ್ದೇಶಿಸಿದ್ದ ವಾಟ್ಸ್ಅಪ್ ಸಂಸ್ಥೆಯು ಎಚ್ಚೆತ್ತುಕೊಂಡಿದ್ದು, ಕಂಪೆನಿಯ ಮೇಲಾಗಿರುವ ಡ್ಯಾಮೇಜನ್ನು ಸರಿಪಡಿಸಲು ಪರದಾಡುತ್ತಿದೆ.
ವಾಟ್ಸ್ಅಪ್ ಕಂಪೆನಿಯು ತನ್ನೆಲ್ಲಾ ಮಾಹಿತಿಯನ್ನು ಬೇರೆ ಕಂಪೆನಿಗೆ ಮಾರಾಟ ಮಾಡಲು ಬಳಕೆದಾರರ ಅನುಮತಿ ಕೇಳಿತ್ತು. ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾದ ಬಳಿಕ ರಾತ್ರಿ ಬೆಳಗಾಗುವುದರ ಒಳಗೆ ಕೋಟ್ಯಂತರ ಬಳಕೆದಾರರು ವಾಟ್ಸ್ಅಪ್ ಗೆ ಪರ್ಯಾಯವಾಗಿ ಸಿಗ್ನಲ್ ಮತ್ತು ಟೆಲಿಗ್ರಾಂ ಆ್ಯಪ್ ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಕೋಟ್ಯಂತರ ಬಳಕೆದಾರರನ್ನು ಕಳೆದುಕೊಂಡ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ವಾಟ್ಸ್ಅಪ್ ಕಂಪೆನಿಯು ಡ್ಯಾಮೇಜ್ ಸರಿಪಡಿಸಿಕೊಳ್ಳಲು ಪರದಾಟ ನಡೆಸುತ್ತಿದೆ. ಇಂದಿನಿಂದ ಎಲ್ಲಾ ಬಳಕೆದಾರರಿಗೆ ವಾಟ್ಸ್ಅಪ್ ಕಡೆಯಿಂದಲೇ ಸ್ಟೇಟಸ್ ಹಾಕಲಾಗಿದೆ. ಅದರಲ್ಲಿ ನಿಮ್ಮ ಪ್ರೈವೆಸಿ ಕಾಪಾಡಲು ನಾವು ಬದ್ಧರಾಗಿದ್ದು, ವಾಟ್ಸಾಪ್ ನಿಮ್ಮ ವೈಯಕ್ತಿಕ ಮೆಸೇಜ್ಗಳನ್ನು ಓದುವುದಿಲ್ಲ. ಅದು ಎಂಡ್ ಟು ಎಂಡ್ ಎನ್ಸ್ಕ್ರಿಪ್ಟೆಡ್ ಆಗಿದ್ದು, ವಾಟ್ಸಾಪ್ ನೀವು ಶೇರ್ ಮಾಡಿರುವ ಲೊಕೇಷನ್ ನೋಡಲು ಸಾಧ್ಯವಿಲ್ಲ. ಅಲ್ಲದೇ ವಾಟ್ಸಾಪ್ ನಿಮ್ಮ ಕಾಂಟ್ಯಾಕ್ಟ್ಗಳನ್ನು ಫೇಸ್ಬುಕ್ ಜೊತೆ ಶೇರ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.