ಸುಳ್ಯಕ್ಕೆ ಆಗಮಿಸಿದ ನೂತನ ಸಚಿವ ಎಸ್.ಅಂಗಾರ ➤ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 15. ಸಚಿವರಾಗಿ ಮೊದಲ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಸಚಿವ ಅಂಗಾರರಿಗೆ ಸಂಘದ ಮುಖಂಡರು ಹಾಗೂ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಮಾಡಲಾಯಿತು.

ಕಾರ್ಯಕರ್ತರ ಮುಗಿಲು ಮುಟ್ಟಿದ ಹರ್ಷೋದ್ಘಾರದ ನಡುವೆ ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದ ಸಚಿವರಿಗೆ ಮುಖಂಡರು, ಕಾರ್ಯಕರ್ತರು ಸೇರಿದಂತೆ ಎಲ್ಲರೂ ಪಕ್ಷಭೇದ ಮರೆತು ಅಭಿನಂದಿಸಿದರು. ಸಚಿವ ಅಂಗಾರರು ಎಲ್ಲರಿಗೂ ಕೈ ಮುಗಿದು ಧನ್ಯವಾದ ಸಮರ್ಪಿಸಿದರು.

Scroll to Top