ನೂಜಿಬಾಳ್ತಿಲ ಪಂಚಾಯತ್ ಸಿಬ್ಬಂದಿ ತಮ್ಮಯ್ಯ ಗೌಡ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜ.09. ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಮ್ಮಯ್ಯ ಗೌಡ (51) ರವರು ಶನಿವಾರದಂದು ನಿಧನ ಹೊಂದಿದರು.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತಿಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಗಾಣದ ಕೊಟ್ಟಿಗೆ ನಿವಾಸಿಯಾಗಿದ್ದ ತಮ್ಮಯ್ಯ ಗೌಡರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

Scroll to Top