ಫೋನ್ ಪೇ ಗ್ರಾಹಕರಿಗೆ ಬಂಪರ್ ಆಫರ್ ➤ ಅದೇನೆಂಬ ಕುತೂಹಲವೇ..?

(ನ್ಯೂಸ್ ಕಡಬ) newskadaba.com ನವದೆಹಲಿ, ಜ.08. ಡಿಜಿಟಲ್ ತಂತ್ರಜ್ಞಾನದೊಂದಿಗೆ ಹಣವನ್ನು ವರ್ಗಾಯಿಸಬಲ್ಲ ಸೌಲಭ್ಯವನ್ನು ಕಲ್ಪಿಸಿರುವ ಫೋನ್ ಪೇ ಸಂಸ್ಥೆಯು ತನ್ನ ಗ್ರಾಹಕರಿಗೆ ಸಂತಸದ ಸುದ್ದಿಯೊಂದನ್ನು ಹೊರತಂದಿದೆ.

ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಕಡಿಮೆ ಇದ್ದು, 18 ವರ್ಷದಿಂದ 50 ವರ್ಷ ವಯಸ್ಸಿನವರಿಗೆ ಫೋನ್ ಪೇ ಕಂಪೆನಿಯು ಲೈಫ್ ಐಸಿಐಸಿಐ ಲೈಫ್ ಇನ್ಸೂರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ವಿಶೇಷ ಇನ್ಸೂರೆನ್ಸ್ ಯೋಜನೆಯನ್ನು ಕಲ್ಪಿಸಿದ್ದು, 1 ಲಕ್ಷದಿಂದ 20 ಲಕ್ಷದವರೆಗೆ ವಿಮೆ ಪಾಲಿಸಿ ಪಡೆಯಬಹುದಾಗಿದೆ. ಕೇವಲ 149 ರೂಪಾಯಿ ಪಾವತಿಸುವ ಮೂಲಕ ಫೋನ್ ಪೇ ಗ್ರಾಹಕರು ವರ್ಷಪೂರ್ತಿ ವಿಮೆ ಸೌಲಭ್ಯ ಪಡೆಯಬಹುದಾಗಿದೆ. ಇನ್ಸೂರೆನ್ಸ್ ಯೋಜನೆಯನ್ನು ಆ್ಯಕ್ಟಿವೇಟ್ ಮಾಡಲು ಫೋನ್ ಪೇಯ ಮೈ ಮನಿ ವಿಭಾಗವನ್ನು ಕ್ಲಿಕ್ ಮಾಡಿದ ನಂತರ ವಿಮೆ ವಿಭಾಗವನ್ನು ಕ್ಲಿಕ್ ಮಾಡಿ ವಿಮೆ ಮೊತ್ತವನ್ನು ಪಾವತಿಸಬೇಕಾಗಿದೆ.

Also Read  ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿದ್ದ 42 ಆ್ಯಪ್ ಗಳು ಬ್ಯಾನ್..!- ಸರಕಾರದಿಂದ ಮಹತ್ವದ ಮಾಹಿತಿ

error: Content is protected !!
Scroll to Top