ಬ್ರೇಕಿಂಗ್ | ಸುಳ್ಯ: ಖಾಸಗಿ ಬಸ್ ಪಲ್ಟಿ ➤ ಹಲವರು ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಜ.03. ಸುಳ್ಯದಿಂದ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಹಲವರು ಗಂಭೀರ ಗಾಯಗೊಂಡ ಘಟನೆ ಭಾನುವಾರದಂದು ಆಲೆಟ್ಟಿ ಸಮೀಪದ ಬಡ್ಡಡ್ಕ ಎಂಬಲ್ಲಿ ನಡೆದಿದೆ.

ಪುತ್ತೂರಿನ ಸುರಕ್ಷಾ ಸಂಸ್ಥೆಯ ಖಾಸಗಿ ಬಸ್ ಮದುವೆ ಸಮಾರಂಭಕ್ಕೆಂದು ಜನರನ್ನು ಕರೆದೊಯ್ಯುತ್ತಿದ್ದ ವೇಳೆ ಆಲೆಟ್ಟಿ ಸಮೀಪದ ಬಡ್ಡಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಹಲವರು ಗಂಭೀರ ಗಾಯಗೊಂಡಿದ್ದು, ಕಲೆವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top