ಇನ್ನು ಮುಂದೆ ವಧು-ವರರು ವಿವಾಹ ಮಂಟಪದಲ್ಲೇ ವಚನ ನೀಡುವ ಹೊಸ ಯೋಜನೆ ಜಾರಿ ► ವಚನದಲ್ಲಿ ಏನಿದೆ ತಿಳಿಯಬೇಕೆ..???

(ನ್ಯೂಸ್ ಕಡಬ) newskadaba.com ಸಿಕಾರ್, ಅ.12. ಹಿಂದು ವಿವಾಹದ ವೇಳೆ ನೂತನ ವಧು-ವರರು ಅಗ್ನಿ ಕುಂಡದ ಸುತ್ತಲೂ 7 ಸುತ್ತು ಸುತ್ತಿ ಸಪ್ತಪದಿ ತುಳಿಯುವುದು ತಲೆತಲಾಂತರಗಳಿಂದಲೂ ನಡೆದು ಬಂದ ಸಂಪ್ರದಾಯ. ಆದರೆ ರಾಜಸ್ಥಾನದಲ್ಲಿ ಇನ್ನು ಮುಂದೆ ನಡೆಯುವ ವಿವಾಹದಲ್ಲಿ ನೂತನ ವಧು-ವರರು ಅಗ್ನಿಕುಂಡದ ಸುತ್ತಲೂ 7ರ ಬದಲು 8 ಸುತ್ತು ಹಾಕಿ ಸಪ್ತಪದಿ ಬದಲು ಅಷ್ಟಪದಿ ತುಳಿಯುವಂತೆ ರಾಜಸ್ಥಾನದ ಸಿಕಾರ್ ಜಿಲ್ಲಾಡಳಿದ ಅರ್ಚಕರಿಗೆ ಮನವಿ ಮಾಡಿದೆ.

ರಾಜ್ಯದ 18 ಜಿಲ್ಲೆಗಳಲ್ಲಿ ಪ್ರತಿ 100 ಗಂಡು ಮಕ್ಕಳಿಗೆ 90 ಹೆಣ್ಣು ಮಕ್ಕಳು ಮಾತ್ರ ಜನಿಸುತ್ತಾರೆ. ಅದರಲ್ಲೂ ಸಿಕಾರ್ ಜಿಲ್ಲೆಯಲ್ಲಿ ಪ್ರತಿ 100 ಗಂಡುಮಕ್ಕಳಿಗೆ 85ಕ್ಕಿಂತ ಹೆಣ್ಣುಮಕ್ಕಳು ಮಾತ್ರವೇ ಇದ್ದಾರೆ ಇದಕ್ಕೆಲ್ಲ ಕಾರಣ, ಹೆಣ್ಣು ಭ್ರೂಣ ಹತ್ಯೆ. ಹೆಣ್ಣು ‘ಭ್ರೂಣ ಹತ್ಯೆಗೆ ಕಡಿವಾಣ ಹಾಕಲು ಮುಂದಾಗಿರುವ ಇಲ್ಲಿನ ಜಿಲ್ಲಾಡಳಿತ, ಇನ್ನು ಮುಂದೆ ವಿವಾಹ ಸಂದರ್ಭದಲ್ಲೇ ‘ನಾವು ಹೆಣ್ಣು ಭ್ರೂಣ ಹತ್ಯೆ ಮಾಡುವುದಿಲ್ಲ. ನಮಗೆ ಹುಟ್ಟುವುದು ಹೆಣ್ಣು ಮಗುವಾದರೂ ಅದನ್ನು ನಾವು ಮನಃಪೂರ್ವಕವಾಗಿ ಸ್ವೀಕರಿಸಲಿದ್ದೇವೆ’ ಎಂದು ವಧು-ವರರಿಂದ ವಿವಾಹ ಮಂಟಪದಲ್ಲೇ ವಚನ ಪಡೆಯುವ ಹೊಸ ಯೋಜನೆ ಜಾರಿಗೆ ಮುಂದಾಗಿದೆ.

Also Read  ಸ್ವಯಂಘೋಷಿತ ದೇವಮಾನವ ಅಸಾರಾಂಗೆ ಜೀವಾವಧಿ ಶಿಕ್ಷೆ!

ಈ ನಿಟ್ಟಿನಲ್ಲಿ ಇತ್ತೀಚೆಗೆ ಜಿಲ್ಲೆಯ ಅರ್ಚಕರ ಜೊತೆ ಮಾತುಕತೆ ನಡೆಸಿರುವ ಜಿಲ್ಲಾಡಳಿತ, ಸಂಪ್ರದಾಯದಂತೆ ಸಪ್ತಪದಿ ತುಳಿದ ಬಳಿಕ, ಮತ್ತೊಂದು ಮಂತ್ರವನ್ನು ಜಪಿಸಿ ಅಲ್ಲಿಸಿ ಹೆಣ್ಣು ಭ್ರೂಣ ಹತ್ಯೆ ತಡೆಯುವ ಬಗ್ಗೆ ನೂತನ ವಧು-ವರರಿಂದ ವಚನ ಪಡೆಯಿರಿ. ಸಪ್ತಪದಿ ಬದಲು ಅಷ್ಟಪದಿ ಹಾಕಿಸಿ. ಈ ಮೂಲಕ ಹೆಣ್ಣು ಭ್ರೂಣ ಹತ್ಯೆಯ ನಮ್ಮ ಆಂದೋಲನಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿಕೊಂಡಿದೆ.

Also Read  ಸೆ.12 ಇಂದ್ರಧನುಷ್ ಕಾರ್ಯಕ್ರಮ

 

error: Content is protected !!
Scroll to Top