ಗ್ರಾ.ಪಂ.ಚುನಾವಣೆಯಲ್ಲಿ ಗೆದ್ದ ವ್ಯಕ್ತಿಗೆ ಸಿಕ್ಕಿತು ರಾಯಲ್ ಎನ್‌ಫೀಲ್ಡ್‌ ➤ ಅಭಿಮಾನಿಗಳ ಗಿಫ್ಟ್ ಗೆ ಫಿದಾ ಆದ ಹ್ಯಾಟ್ರಿಕ್ ವೀರ



(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ.02. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರನೇ ಬಾರಿ ಗೆಲುವು ಸಾಧಿಸಿದ ಅಭ್ಯರ್ಥಿಯೋರ್ವರಿಗೆ ಬೆಂಬಲಿಗರ ತಂಡವೊಂದು ರಾಯಲ್‌ ಎನ್‌ಫೀಲ್ಡ್‌ ಮೆಟಿಯೋರ್‌ ಬೈಕ್‌ನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದಾರೆ.







ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕಳೆದೆರಡು ಅವಧಿಯಲ್ಲಿ ಸದಸ್ಯನಾಗಿ ಆಯ್ಕೆಯಾಗಿದ್ದ ಎಸ್‌.ಮಹೇಶ್‌ ಅವರು ಈ ಬಾರಿ ನಡೆದ ಚುನಾವಣೆಯಲ್ಲಿ ಮತ್ತೆ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ತಮ್ಮ ಸ್ನೇಹಿತ ಗೆದ್ದ ಖುಷಿಗೆ ಮಹೇಶ್‌ ನ ಅಭಿಮಾನಿಗಳು ಹಣವನ್ನು ಸಂಗ್ರಹಿಸಿ ರಾಯಲ್‌ ಎನ್‌ಫೀಲ್ಡ್‌ನ ಮೆಟಿಯೋರ್‌ ಖರೀದಿಸಿ ಸ್ನೇಹಿತನಿಗೆ ನೀಡಿದ್ದಾರೆ.






error: Content is protected !!
Scroll to Top