ಆನ್‍ಲೈನ್ ನಲ್ಲಿ 225 ಮೊಬೈಲ್ ಗಳನ್ನು ಬುಕ್ ಮಾಡಿ ► ಖಾಲಿ ಡಬ್ಬ ಕಥೆ ಕಟ್ಟಿ, 52 ಲಕ್ಷ ವಂಚಿಸಿದ್ದ ಕಳ್ಳನ ಸೆರೆ..!!!

(ನ್ಯೂಸ್ ಕಡಬ) newskadaba.com ನವದೆಹಲಿ,ಅ.11.  ಆನ್‍ಲೈನ್ ನಲ್ಲಿ ದುಬಾರಿ ಬೆಲೆಯ ಮೊಬೈಲ್ ಫೋನ್ ಬುಕ್ ಮಾಡಿ, ಬಳಿಕ ತನಗೆ ಫೋನ್ ಬಂದಿಲ್ಲ ಎಂದು ಹೇಳಿ ಇ-ಕಾಮರ್ಸ್ ಕಂಪನಿಯೊಂದಕ್ಕೆ ಸುಮಾರು 52 ಲಕ್ಷ ರೂ. ವಂಚಿಸಿದ್ದ ಯುವಕನನ್ನು ದೆಹಲಿಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉತ್ತರ ದೆಹಲಿಯ ತ್ರಿ ನಗರದ ನಿವಾಸಿಯಾಗಿರುವ ಶಿವಂ  ಚೋಪ್ರಾ  ( 21) ಎಂದು ಗುರುತಿಸಲಾಗಿದೆ. ಹೋಟೆಲ್ ಮ್ಯಾನೇಜಮೆಂಟ್ ಪದವಿಧರನಾಗಿರುವ ಶಿವಂ ಇದೂವರೆಗೂ ದುಬಾರಿ ಬೆಲೆಯ 225 ಮೊಬೈಲ್ ಗಳನ್ನು ಬುಕ್ ಮಾಡಿ, ಬೇರೆಯವರಿಗೆ ಮಾರಾಟ ಮಾಡಿ, ಬಳಿಕ ತನಗೆ ಫೋನ್ ಬಂದಿಲ್ಲ ಎಂದು ಸುಳ್ಳು ಹೇಳಿ ಸುಮಾರು 166 ಬಾರಿ ಕಂಪನಿಗಳಿಂದ ಮರಳಿ ಹಣ ಪಡೆದಿದ್ದಾನೆ.

ಶಿವಂ ಸದ್ಯ ನಿರುದ್ಯೋಗಿಯಾಗಿದ್ದು, ಈ ಹಿಂದೆ ಹೋಟೆಲ್ ಗಳಲ್ಲಿ ಕೆಲವು ದಿನ ಕೆಲಸ ಮಾಡಿಕೊಂಡಿದ್ದ. ಕಳೆದ ವಾರ ಆನ್‍ಲೈನ್ ಚೀಟಿಂಗ್ ಸಂಬಂಧಿಸಿದಂತೆ ಶಿವಂ ಬಗ್ಗೆ ಇ-ಕಾಮರ್ಸ್ ಕಂಪನಿಯೊಂದು ತನ್ನ ಆಂತರಿಕ ತನಿಖೆಯ ಅನ್ವಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

Also Read  ಲಾರಿಗೆ ತೂಫಾನ್ ವಾಹನ ಡಿಕ್ಕಿ.!➤ ಏಳು ಮಂದಿ ಮೃತ್ಯು, ಹಲವರಿಗೆ ಗಂಭೀರ ಗಾಯ

ಶಿವಂ ಸುಮಾರು 141 ಹೊಸ ಸಿಮ್ ಕಾರ್ಡ್ ಗಳನ್ನು ಪಡೆದು, ಈ ನಂಬರ್ ಗಳಿಂದ 50ಕ್ಕೂ ಹೆಚ್ಚು ಇ-ಮೇಲ್ ಐಡಿಗಳನ್ನು ಕ್ರಿಯೇಟ್ ಮಾಡಿಕೊಂಡಿದ್ದನು. ನಕಲಿ ಸಿಮ್ ನಂಬರ್ ಮತ್ತು ಮೇಲ್ ಐಡಿಗಳಿಂದ ಆನ್‍ಲೈನ್ ಶಾಪಿಂಗ್ ಅಕೌಂಟ್ ಓಪನ್ ಮಾಡಿ, ಅವುಗಳ ಮೂಲಕವೇ ಶಿವಂ ವ್ಯವಹಾರ ಮಾಡುತ್ತಿದ್ದನು ಎಂದು ಡಿಸಿಪಿ ಮಿಲಿಂದ್ ದುಂಬೆರೆ ಹೇಳಿದ್ದಾರೆ.

ಆನ್‍ಲೈನ್ ನಲ್ಲಿ ಮೊಬೈಲ್ ಗಳನ್ನು ಬುಕ್ ಮಾಡಿದ ಶಿವಂ, ಡೆಲಿವರಿ ಅಡ್ರೆಸ್ ಸರಿಯಾಗಿ ಹೇಳುತ್ತಿರಲಿಲ್ಲ. ಡೆಲಿವರಿ ಬಾಯ್ ಗಳು ಕರೆ ಮಾಡಿದಾಗ ಪ್ರತಿಬಾರಿಯೂ ಬೇರೆ ಬೇರೆ ಸ್ಥಳಗಳಲ್ಲಿ ಮೊಬೈಲ್ ಗಳನ್ನು ಪಡೆದುಕೊಳ್ಳುತ್ತಿದ್ದನು.

ಬುಕ್ ಮಾಡಿದ ಮೊಬೈಲ್ ಬಂದ ಕೂಡಲೇ ಕಂಪನಿಗೆ ಕರೆ ಮಾಡಿ ಖಾಲಿ ಡಬ್ಬ ಮಾತ್ರ ಬಂದಿದೆ ಎಂದು ಹೇಳುತ್ತಿದ್ದನು. ಗ್ರಾಹಕರ ಹಿತಾಸಕ್ತಿಗಾಗಿ ಕಂಪನಿ ಶಿವಂನಿಗೆ ಮೊಬೈಲ್ ಗೆ ನೀಡಿದ ಹಣದೊಂದಿಗೆ ಗಿಫ್ಟ್ ವೋಚರ್ ಸಹ ನೀಡುತ್ತಿದ್ದರು.

ಶಿವಂ ಪ್ರತಿಬಾರಿಯೂ ಶಾಪಿಂಗ್ ಮಾಡುವಾಗ ಶುಭಂ ಎಂಬ ಹೆಸರನ್ನು ಹೇಳುತ್ತಿದ್ದನು. ಮೊಬೈಲ್‍ಗಳು ಪ್ರತಿಬಾರಿಯೂ ದೆಹಲಿಯ ತ್ರಿನಗರದಿಂದಲೇ ಬುಕ್ ಮಾಡಲಾಗುತ್ತಿತ್ತು ಹಾಗೂ ಮೂವರು ಡೆಲಿವರಿ ಬಾಯ್ ಗಳು ಈತನನ್ನು ಗುರುತಿಸಿದ್ದರು. ಇದರಿಂದ ಅನುಮಾನಗೊಂಡ ಕಂಪನಿ ಈ ಸಂಬಂಧ ವಾಯುವ್ಯ ದೆಹಲಿಯ ಶಾಲಿಮಾರ್ ಭಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

Also Read  ಮಹಿಳೆಯೋರ್ವರ 4 ಪವನ್‌ ತೂಕದ ಚಿನ್ನದ ಕರಿಮಣಿಸರ ಎಳೆದು ಪರಾರಿ

ದೂರು ದಾಖಲಾದ ಬಳಿಕ ಪೊಲೀಸರು ಆರೋಪಿ ಶಿವಂ ಚೋಪ್ರಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ಎನ್ನುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

error: Content is protected !!
Scroll to Top