ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕಿರುತೆರೆಯ ಖ್ಯಾತ ನಟಿ..!!

(ನ್ಯೂಸ್ ಕಡಬ) newskadaba.com ತಮಿಳುನಾಡು, ಡಿ.09: ತಮಿಳಿನ ಕಿರುತೆರೆಯಲ್ಲಿ ಇತ್ತೀಚೆಗೆ ಖ್ಯಾತಿ ಪಡೆದಿದ್ದ ನಟಿ ಚಿತ್ರಾ ಸಾವನ್ನಪ್ಪಿದ್ದಾರೆ. ಪಾಂಡಿಯನ್​ ಸ್ಟೋರ್ಸ್​​ ಖ್ಯಾತಿಯ ನಟಿ ಚಿತ್ರಾ ತಮಿಳುನಾಡಿನ ಹೋಟೆಲ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದೆ.ಚಿತ್ರಾ ಅವರು ಪಾಂಡಿಯನ್​ ಸ್ಟೋರ್ಸ್​ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದರಿಂದಾಗಿಯೇ ಇತ್ತೀಚೆಗೆ ಖ್ಯಾತಿ ಪಡೆದಿದ್ದರು. ಅಲ್ಲದೆ ಉದ್ಯಮಿ ಹೇಮಂತ್​ ರವಿ ಎಂಬುವರೊಂದಿಗೆ ನಿಶ್ಚಿತಾರ್ಥ ಸಹ ನಿಗದಿಯಾಗಿತ್ತು.

ಹೇಮಂತ್​ ರವಿ ಅವರೊಂದಿಗೆ ಹೋಟೆಲ್​ನಲ್ಲಿರುವಾಗಲೇ ಈ ಘಟನೆ ನಡೆದಿದೆ. ಹೇಮಂತ್​ ಅವರೊಂದಿಗೆ ಹೋಟೆಲ್​ನಲ್ಲಿದ್ದ ಚಿತ್ರಾ, ಬೆಳಿಗ್ಗೆ ಇವಿಪಿ ಪಾರ್ಕ್​ನಲ್ಲಿ ಮೊದಲ ಶೆಡ್ಯೂಲ್​ ಶೂಟಿಂಗ್​ ಮುಗಿಸಿಕೊಂಡು ಹೋಟೆಲ್​ ರೂಮಿಗೆ ಬಂದಿದ್ದರಂತೆ. ನಂತರ ಸ್ನಾನಕ್ಕೆ ಹೋಗುವುದಾಗಿ ಹೇಮಂತ್​ ಅವರಿಗೆ ಹೇಳಿ ಹೋದ ಚಿತ್ರಾ, ತುಂಬಾ ಸಮಯವಾದರೂ ಬಾಗಿಲು ತೆಗೆಯಲಿಲ್ಲವಂತೆ. ಇದರಿಂದಾಗಿ ಗಾಬರಿಗೊಂಡ ಹೇಮಂತ್ ಹೋಟೆಲ್​ ಸಿಬ್ಬಂದಿಯನ್ನು ಕರೆಸಿ, ಡುಪ್ಲಿಕೇಟ್​ ಕೀಯಿಂದ ಬಾಗಿಲು ತೆರೆಸಿದ್ದಾರೆ ಎನ್ನಲಾಗಿದೆ.ಹೋಟೆಲ್​ ಸಿಬ್ಬಂದಿ ಬಾಗಿಲು ತೆರೆದಾಗ ಚಿತ್ರಾ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು ಎಂದು ಹೇಳಲಾಗಿದೆ. ಚಿತ್ರಾ ಸೀರೆಯಿಂದ ಫ್ಯಾನ್​ಗೆ ನೇಣು ಹಾಕಿಕೊಂಡಿದ್ದು, ಅವರದ್ದು ಆತ್ಮಹತ್ಯೆ ಎಂದು ಶಂಕಿಸಲಾಗುತ್ತಿದೆ.

Also Read  ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆ: ಸಾರ್ವಜನಿಕರಾಗಲಿ ನೀರಿನೆಡೆಗೆ ಹೋಗದಂತೆ ಮುನ್ನೆಚ್ಚರಿಕೆ ಕ್ರಮ➤ಬೆಳ್ಳಾರೆ ಪೊಲೀಸ್ ಸೂಚನೆ

 

 

error: Content is protected !!
Scroll to Top