ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 11. ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿನ ಎಲ್ಲಾ ಹೊರಗುತ್ತಿಗೆ ನಾನ್ ಕ್ಲಿನಿಕ್ ಹಾಗೂ ಗ್ರೂಪ್ ಡಿ ನೌಕರರಿಗೆ ಜೂನ್ 9 ರಂದು ಒಂದು ತಿಂಗಳ ವೇತನವನ್ನು ಪಾವತಿ ಮಾಡಲಾಗಿದ್ದು, ಹೊರಗುತ್ತಿಗೆ ನಾನ್ ಕ್ಲಿನಿಕ್ ಹಾಗೂ ಗ್ರೂಪ್ ಡಿ ನೌಕರರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ.

ಗ್ರೂಪ್ ಡಿ ನೌಕಕರರ ವೇತನಕ್ಕೆ ಸಂಬಂಧಿಸಿದಂತೆ ರಾಜ್ಯವಲಯದಿಂದ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಎಲ್ಲಾ ನೌಕರರಿಗೆ ಹಿಂಬಾಕಿ ಮಾಡದೇ ಒಂದು ವಾರದೊಳಗೆ ವೇತನ ಪಾವತಿಸಲು ಸೂಕ್ತ ಕ್ರಮಕೈಗೊಳ್ಳಲಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top