ಭಾರತೀಯ ವಾಯು ಸೇನೆಯ ವಿಮಾನ ಪತನ ► 5 ಸೈನಿಕರ ಮೃತ್ಯು

(ನ್ಯೂಸ್ ಕಡಬ) newskadaba.com ಗುವಾಹಾಟಿ, ಅ.6. ಭಾರತೀಯ ವಾಯು ಸೇನೆಯ ವಿಮಾನವೊಂದು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಪತನಗೊಂಡಿದ್ದು 5 ಸೈನಿಕರು ಸಾವನ್ನಪ್ಪಿದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ.

ಚೀನಾ ಹಾಗೂ ಭಾರತದ ಗಡಿಯ 12 ಕಿ.ಮೀ ವ್ಯಾಪ್ತಿ ಭೂ ಪ್ರದೇಶದಲ್ಲಿ ಇಂದು ಮುಂಜಾನೆ 6 ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಎಂಐ 17ವಿ5 ವಿಮಾನ ಪತನಗೊಂಡಿದ್ದು ಅವಘಡದಲ್ಲಿ 5 ಸೈನಿಕರು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ತೀವ್ರ ಗಾಯಗಳಾಗಿವೆ. ವಿಮಾನದಲ್ಲಿ ಒಟ್ಟು 7 ಮಂದಿ ಇದ್ದರು ಎಂದು ವರದಿಯಾಗಿದೆ.

ವಿಮಾನವು ಏರ್ ಮೇಂಟೆನೆನ್ಸ್ ಮಿಷನ್‍ನಲ್ಲಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ವಿಮಾನ ಪತನವಾಗಲು ಸ್ಪಷ್ಟ ಕಾರಣ ತಿಳಿಯಲು ಭಾರತೀಯ ವಾಯು ಸೇನೆ ತನಿಖೆಗೆ ಅದೇಶವನ್ನು ನೀಡಿದೆ.

Also Read  ಜುಲೈ.21ಕ್ಕೆ ಗ್ಯಾನವ್ಯಾಪಿ ವೈಜ್ಞಾನಿಕ ಸಮೀಕ್ಷೆಯ ಕೋರ್ಟ್ ತೀರ್ಪು ಪ್ರಕಟ

ಎಂಐ 17ವಿ5 ವಿಮಾನವು ರಷ್ಯಾ ನಿರ್ಮಿತ ಮಿಲಿಟರಿ ರಕ್ಷಣಾ ವಿಮಾನವಾಗಿದ್ದು, ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಚರಣೆಗಳನ್ನು ಕೈಗೊಳ್ಳಲು ಈ ವಿಮಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಶ್ರೇಣಿಯ ವಿಮಾನಗಳನ್ನು ಇತ್ತೀಚೆಗೆ ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಉಂಟಾದ ಪ್ರವಾಹ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿತ್ತು.

error: Content is protected !!
Scroll to Top