ದೆಹಲಿ: ದಾಳಿ ನಡೆಸಲು ಸಜ್ಜಾಗಿದ್ದ ಇಬ್ಬರು ಜೆಇಎಂ ಉಗ್ರರ ಬಂಧನ

(ನ್ಯೂಸ್ ಕಡಬ) newskadaba.com ಮುಂಬೈ, ನ. 17. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ತಯಾರಾಗಿದ್ದ ಇಬ್ಬರು ಜೈಷ್-ಇ-ಮೊಹಮ್ಮದ್ ಉಗ್ರ ಸಂಟನೆಯ ಭಯೋತ್ಪಾದಕರನ್ನು ದೆಹಲಿಯ ಸರಾಯ್ ಕೇಲ್ ಖಾನ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.


ಬಂಧಿತ ಉಗ್ರರನ್ನು ಅಬ್ದುಲ್ ಲತೀಫ್ (22) ಹಾಗೂ ಮೊಹಮ್ಮದ್ ಅಶ್ರಫ್ ಖತಾನಾ (20) ಎಂದು ಗುರುತಿಸಲಾಗಿದೆ. ಇವರಿಬ್ಬರು ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಾಗಿದ್ದು, ಪಾಕಿಸ್ತಾದನ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆಂದು ಹೇಳಲಾಗಿದೆ.ಇವರಿಬ್ಬರ ಬಳಿಯಿದ್ದ ಅರೆ ಸ್ವಯಂಚಾಲಿತ ಪಿಸ್ತೂಲುಗಳು ಮತ್ತು 10 ಜೀವಂತ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಕನ್ನಡ ರಾಜ್ಯೋತ್ಸವ ಆಚರಣೆಗೆ ಹೊಸ ಮಾರ್ಗಸೂಚಿ ಪ್ರಕಟ

error: Content is protected !!
Scroll to Top