ಕಾಸರಗೋಡು: ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 17:  ಮೂವರು ಸಹಪಾಠಿಗಳ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಇಂದು ಪತ್ತೆಯಾಗಿದೆ. ಮೃತಪಟ್ಟ ಬಾಲಕನನ್ನು ಚೆಮ್ನಾಡ್ ಕೊಂಬನಡ್ಕದ ಮಿಸ್ಭಾಹ್ (15) ಎಂದು ಗುರುತಿಸಲಾಗಿದೆ.

 

 

ಮಿಸ್ಭಾಹ್ ಚೆಮ್ನಾಡ್ ಜಮಾ ಅತ್ ಹಯರ್ ಸೆಕಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು, ಮೂವರು ಸ್ನೇಹಿತರ ಜೊತೆ ಚಂದ್ರಗಿರಿ ಹೊಳೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರುಪಾಲಾಗಿದ್ದನು. ಸ್ಥಳೀಯರು, ಅಗ್ನಿಶಾಮಕ ದಳದ ಸಿಬಂದಿಗಳು ಶೋಧ ಕಾರ್ಯಚರಣೆ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಬಳಿಕ ಇಂದು ಸ್ಥಳೀಯರು ಮತ್ತೆ ಶೋಧ ಕಾರ್ಯಚರಣೆ ನಡೆಸಿದ್ದು, ಬಾಲಕ ಮುಳುಗಿದ ಸ್ಥಳದಲ್ಲೇ ಮೃತದೇಹ ಪತ್ತೆಯಾಗಿದೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Also Read  118 ಕೋಟಿ ರೂ. ನಕಲಿ ಬಿಲ್ ಹಗರಣ ➤ 8 ಬಿಬಿಎಂಪಿ ಇಂಜಿನಿಯರ್ ಗಳ ಅಮಾನತು

 

 

error: Content is protected !!
Scroll to Top