ಅಪ್ರಾಪ್ತೆಯ ಮೇಲೆ ಅತ್ಯಾಚಾರವೇಸಗಿ ಶ್ವಾಸಕೋಶ ಕೊಂಡೊಯ್ದ ದುರುಳರು

(ನ್ಯೂಸ್ ಕಡಬ) newskadaba.com ಕಾನ್ಪುರ ನ. 17: ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಶ್ವಾಸಕೋಶ ಬಗೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಅರಣ್ಯ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಭಾನುವಾರ ಪತ್ತೆಯಾಗಿತ್ತು.

ಮೃತದೇಹದಿಂದ ಶ್ವಾಸಕೋಶವನ್ನು ಹೊರಗೆಳೆದು ತೆಗೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯೊಬ್ಬರಿಗೆ ಮಗುವಾಗದೇ ಇರುವುದರಿಂದ ವಾಮಾಚಾರ ಮಾಡುವುದಕ್ಕಾಗಿ ಈ ಕೃತ್ಯ ಎಸಗಲಾಗಿತ್ತು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗೌತಮಪುರ ಪ್ರದೇಶದ ಬಾಲಕಿಯು ದೀಪಾವಳಿಯ ದಿನ ರಾತ್ರಿ ನಾಪತ್ತೆಯಾಗಿದ್ದಳು. ಬಳಿಕ ಆಕೆಯ ಮೃತದೇಹ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿ ಅಂಕುಲ್ ಕುಮಾರ್ (20) ಮತ್ತು ಬೀರನ್ (31) ಎಂಬುವವರನ್ನು ಭಾನುವಾರ ಪೊಲೀಸರು ಬಂಧಿಸಿದ್ದರು. ಇವರಿಬ್ಬರೂ ಬಾಲಕಿಯನ್ನು ಹತ್ಯೆ ಮಾಡಿ ಶ್ವಾಸಕೋಶವನ್ನು ಹೊರತೆಗೆದು ಮುಖ್ಯ ಸಂಚುಕೋರ ಪರಶುರಾಮ್ ಕುರಿಲ್‌ಗೆ ವಾಮಾಚಾರ ಮಾಡುವುದಕ್ಕಾಗಿ ನೀಡಿದ್ದರು ಎಂದು ಗೌತಮಪುರ ಗ್ರಾಮೀಣ ವಿಭಾಗದ ಎಎಸ್‌ಪಿ ಬ್ರಿಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.

Also Read  ಚಲಿಸುತ್ತಿದ್ದ ಕಾರೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ➤ ಅದೃಷ್ಟವಶಾತ್ ಅಪಾಯದಿಂದ ಪಾರಾದ ಚಾಲಕ

 

 

error: Content is protected !!
Scroll to Top