ಡ್ರಗ್ಸ್ ದಂಧೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನ ಹತ್ಯೆ ➤ ಐದು ಮಂದಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ತಮಿಳುನಾಡು, .10: ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯಾದ ಪತ್ರಕರ್ತನನ್ನು ಇಸ್ರೇವೆಲ್ ಮೋಸೆಸ್(27) ಎಂದು ಗುರುತಿಸಲಾಗಿದೆ.

 

 

ಈತ ಡ್ರಗ್ಸ್ ದಂಧೆಯ ವರದಿ ಮಾಡುತ್ತಾರೆ ಎಂಬ ಭೀತಿಯಿಂದ ಕಳೆದ ದಿನ ಸಂಜೆ ಮೋಸಸ್ ರನ್ನು ಕರೆ ಮಾಡಿ ಕರೆಸಿಕೊಂಡ ಬಳಿಕ ದುಷ್ಕರ್ಮಿಗಳು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿ ಆತನನ್ನು ರಸ್ತೆಯಲ್ಲಿ ಎಸೆದು ಹೋಗಿದ್ದು, ಬಳಿಕ ಮನೆಯವರಿಗೆ ತಿಳಿದು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಧಿತರು ಸ್ಥಳೀಯ ಕೆರೆಯ ಅಂಗಳದಲ್ಲಿ ರಾತ್ರಿ ವೇಳೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ವರದಿಯಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು  5 ಮಂದಿ ಶಂಕಿತರನ್ನು ಬಂಧಿಸಿದ್ದಾರೆ.

Also Read  ರೈಲಿನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ - ಆರೋಪಿ ಅರೆಸ್ಟ್..!

 

 

error: Content is protected !!
Scroll to Top