ಸುಬ್ರಹ್ಮಣ್ಯ: ನಾಳೆಯಿಂದ ಕೆ.ಎಸ್.ಎಸ್ ಕಾಲೇಜಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, . 07: ನಾಳೆಯಿಂದ ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನಲ್ಲಿ ಉದ್ಯೋಗ ನೈಪುಣ್ಯ ಶಿಬಿರವು ನ.8 ರಿಂದ ಆರಂಭಗೊಂಡು ನ.14 ರವರೆಗೆ ನಡೆಯಲಿದ್ದು, ಶಿಬಿರವನ್ನು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಉದ್ಘಾಟಿಸಲಿದ್ದಾರೆ.

 

 

ಈಗಾಗಲೇ 450 ಶಿಬಿರಾರ್ಥಿಗಳು ಹೆಸರು ನೊಂದಾಯಿಸಿರುವುದಾಗಿ ಶಿಬಿರದ ಸಂಯೋಜಕ ಜಯಪ್ರಕಾಶ್ ಕೂಜುಗೋಡು ಮಾಹಿತಿ ನೀಡಿದರು. ಶಿಬಿರದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ ಮತ್ತು ದುರಸ್ತಿ, ಕಸಿ ಕಟ್ಟುವುದು, ಅಣಬೆ ಕೃಷಿ, ಜೇನು ಕೃಷಿ, ಹೈನುಗಾರಿಕೆ ಮೀನುಗಾರಿಕೆ, ಕೋಳಿ, ಕುರಿ, ಆಡು ಸಾಕಣಿಕೆ, ಪ್ಲಂಬಿಂಗ್ ಮತ್ತು ಎಲೆಕ್ಟ್ರೀಶನ್, ವಿದ್ಯುತ್ ಉಪಕರಣಗಳ ದುರಸ್ತಿ, ಫ್ಯಾಶನ್ ಡಿಸೈನಿಂಗ್, ಫುಡ್ ಟೆಕ್ನಾಲಜಿ, ಕರಕುಶಲ ಸಾಮಾಗ್ರಿಗಳ ತಯಾರಿ ಮತ್ತಿತರ ವಿಷಯಗಳ ಬಗ್ಗೆ ತರಭೇತಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.

Scroll to Top