ಐಪಿಎಲ್ ನಿಂದ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್

(ನ್ಯೂಸ್ ಕಡಬ) newskadaba.com ಅಬುಧಾಬಿ, ಅ.24: ಕಳೆದ ದಿನ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 114 ರನ್ ಗಳಿಸಲಷ್ಟೇ ಶಕ್ತವಾಯಿತು. ಸುಲಭ ಗುರಿ ಬೆಂಬತ್ತಿದ ಮುಂಬೈ 12 ಓವರ್ ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೇ ಜಯಭೇರಿ ಬಾರಿಸಿತು.

 

 

ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 10 ವಿಕೆಟ್ ಗಳಿಂದ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಉದ್ಘಾಟನಾ ಪಂದ್ಯದ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡಿತು. ಈ ಗೆಲುವಿನೊಂದಿಗೆ ಮುಂಬೈ 10 ಪಂದ್ಯಗಳಿಂದ 7 ಜಯ ಹಾಗೂ 3 ಸೋಲಿನೊಂದಿಗೆ 14 ಅಂಕ ಕಲೆ ಹಾಕಿ ಅಗ್ರಸ್ಥಾನಕ್ಕೆ ಮರಳಿದ್ದೂ ಅಲ್ಲದೇ ಪ್ಲೇಆಫ್ ಗೆ ಅರ್ಹತೆ ಪಡೆಯಲು ಮತ್ತಷ್ಟು ಹತ್ತಿರವಾಯಿತು. ಆದರೆ ದಾಖಲೆ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 11 ಪಂದ್ಯಗಳಲ್ಲಿ 3 ಜಯ ಹಾಗೂ 8 ಸೋಲಿನೊಂದಿಗೆ 6 ಅಂಕ ಕಲೆಹಾಕಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿತ್ತು.

Also Read  ಇಂದು ಸುಪ್ರೀಂ ಕೋರ್ಟ್ ನಲ್ಲಿ ಸಿಎಎ ವಿರುದ್ಧ ಸಲ್ಲಿಸಿದ 144 ಅರ್ಜಿಗಳ ವಿಚಾರಣೆ

 

 

error: Content is protected !!
Scroll to Top