ಕಡಬದಲ್ಲಿ ಯುವತಿಯ ಮೊಬೈಲ್ ಎಗರಿಸಿ ಎಸ್ಕೇಪ್ ➤ಕಳ್ಳನ ಗುರುತು ಪತ್ತೆಗಾಗಿ ಮನವಿ

(ನ್ಯೂಸ್ ಕಡಬ) newskadaba.com  ಕಡಬ . 23: ಅ. 22 ಗುರುವಾರ ಮಧ್ಯಾಹ್ನ 12.45 ರ ವೇಳೆಗೆ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿಯತ್ತ ಹೋಗುವ ಸರಕಾರಿ ಬಸ್ ಗೆ ಕಡಬ ಪೇಟೆಯ ಪಂಜ ಕ್ರಾಸ್ ಬಳಿ (ಟಿಸಿ ಪಾಯಿಂಟ್ ಹತ್ತಿರ) ಯ ಬಸ್ ಸ್ಟ್ಯಾಂಡ್ ನಲ್ಲಿ ಹತ್ತಿದ ಯುವತಿಯ ಬ್ಯಾಗ್ ನಿಂದ ಬೆಲೆಬಾಳುವ ಮೊಬೈಲ್ ಸೆಟ್ ನ್ನು ಖದೀಮನೊಬ್ಬ ಎಗರಿಸಿದ್ದಾನೆ.

 

 

ಯುವತಿಯ ಹಿಂದಿನಿಂದ ಬಸ್ ಏರಿದ ಕಳ್ಳ (ಕೆಂಪು ಚೆಕ್ಸ್ ಶರ್ಟ್ ಧರಿಸಿ ಕೈಯಲ್ಲಿ ಬ್ಯಾಗ್ ಹಿಡಿದಾತ) ಮೊಬೈಲ್ ಎಗರಿಸಿ ಕೂಡಲೇ ಬಸ್ ನಿಂದ ಇಳಿದು ಹೋಗುವ ದೃಶ್ಯ ಹತ್ತಿರದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಇನ್ನು ಈ ಖದೀಮನ ಮುಖಚರಿ, ಗುರುತು ಪತ್ತೆಯಾದರೆ ಕಡಬ ಪೊಲೀಸರಿಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.

 

Scroll to Top