ಹೊಸ್ಮಠ ಸೇತುವೆಯ ಪಕ್ಕದಲ್ಲೊಂದು ಮೃತ್ಯುಕೂಪ..❗ ➤ ಜೀವ ಹಾನಿ ಆಗುವುದಕ್ಕಿಂತ ಮೊದಲು ಎಚ್ಚೆತ್ತುಕೊಳ್ಳುವರೇ ಅಧಿಕಾರಿಗಳು..❓

(ನ್ಯೂಸ್ ಕಡಬ) newskadaba.com ಕಡಬ, ಅ. 22. ಉಪ್ಪಿನಂಗಡಿ – ಕುಕ್ಕೆ ಸುಬ್ರಹ್ಮಣ್ಯ ಕಲ್ಪಿಸುವ ರಾಜ್ಯ ಹೆದ್ದಾರಿಯ ಹೊಸಮಠ ಎಂಬಲ್ಲಿ ನೂತನ ಸೇತುವೆಯ ಪಕ್ಕದಲ್ಲೇ ಇರುವ ವೇಗ ನಿಯಂತ್ರಕದ ಬಳಿ ಬೃಹದಾಕಾರಾದ ಹೊಂಡವೊಂದು ನಿರ್ಮಾಣವಾಗಿದ್ದು, ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಈ ಹೊಂಡವು ಮರಣಬಾವಿಯಂತಾಗಿದ್ದು, ಇದನ್ನು ಕಣ್ತುಂಬಿಸಿಕೊಳ್ಳಬೇಕಾದರೆ ಇನ್ನು ಒಂದು ವಾರ ಕಾಯಬೇಕು… ಇದಕ್ಕೆ ಮೊದಲೇ ಇಲ್ಲಿ ಮರಣಬಾವಿ ನಿರ್ಮಾಣವಾಗಬೇಕಿತ್ತು, ಆದರೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಈ ವಿಚಾರ ಚಿತ್ರ ಸಮೇತ ವರದಿಯಾಗುತ್ತಿದ್ದಂತೆಯೇ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಒಂದು ಬಟ್ಟಿ ಕಾಂಕ್ರೀಟ್ ತಂದು ಸುರಿದು ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದಾರಾದರೂ ಅದು ಶಾಶ್ವತವಾಗಿ ಉಳಿಯಲಿಲ್ಲ. ಪುನಃ ಅದೇ ತರಹದ ಸುಮಾರು ಎರಡೂವರೆ ಫೀಟ್ ಅಗಲದಲ್ಲಿ ಗುಂಡಿ ನಿರ್ಮಾಣವಾಗಿ ವಾಹನ ಸವಾರರಿಗೆ ಕಂಟಕವಾಗಿದೆ.

ಇಷ್ಟೆಲ್ಲ ನಡೆದಿದ್ದರೂ ಏನು ಅರಿಯದೆ ಸಂಬಂಧಪಟ್ಟ ಇಲಾಖೆಯವರು ಕಣ್ಮುಚ್ಚಿ ಕುಳಿತಂತಾಗಿದೆ…ಇಲ್ಲಿ ಮರಣಬಾವಿ ಸೃಷ್ಟಿಸಿಯೇ ಸಿದ್ಧ ಎಂಬ ಪಟ್ಟು ಹಿಡಿದು ಕುಳಿತಿರುವ ಇಲಾಖೆಗೆ ಇನ್ನು ಯಾವ ರೀತಿ ಮನವಿ ಮಾಡಬೇಕು ಎಂಬ ಪ್ರಶ್ನೆಯನ್ನು ವಾಹನ ಸವಾರರು ಮುಂದಿಡುತ್ತಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ಗಮನಹರಿಸಿ ಮುಂದಾಗುವ ಅಪಾಯವನ್ನು ತಪ್ಪಿಸುವಲ್ಲಿ ಕೈಜೋಡಿಸಬೇಕಾಗಿದೆ.

Also Read  ಎಂ.ಜೆ.ಎಸ್.ಎಸ್.ಎ. ಮಂಗಳೂರು ಧರ್ಮಪ್ರಾಂತ್ಯದ ಮುಖ್ಯ ನಿರ್ದೇಶಕರಾಗಿ ಫಾ| ಪಿ.ಕೆ. ಅಬ್ರಹಾಂ ಆಯ್ಕೆ

error: Content is protected !!
Scroll to Top